×
Ad

ಟೈಲರಿಂಗ್ ಮೆಷಿನ್, ರೇಂಜ್ ಮುಅಲ್ಲಿಮರಿಗೆ ರಂಝಾನ್ ಕಿಟ್ ವಿತರಣೆ

Update: 2023-03-17 22:29 IST

ಉಳ್ಳಾಲ: ಸಮಸ್ತ ಕೇರಳ ಮದರಸ ಮ್ಯಾನೇಜ್ಮೆಂಟ್ ಮತ್ತು ಸಮಸ್ತ ಕೇರಳ ಜಂ. ಇಯ್ಯತುಲ್ ಮುಅಲ್ಲಿಮೀನ್ ಕಿನ್ಯ ರೇಂಜ್ ಇದರ ಆಶ್ರಯದಲ್ಲಿ  ಟೈಲರಿಂಗ್ ತರಬೇತಿ ಪಡೆದವರಿಗೆ ಟೈಲರಿಂಗ್ ಮೆಷಿನ್  ಹಾಗೂ ರೇಂಜ್ ಮುಅಲ್ಲಿಮರಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮವು ನಾಟೆಕಲ್ ನಲ್ಲಿ ನಡೆಯಿತು.

ಜಂಇಯತುಲ್ ಮುಅಲ್ಲಿಮೀನ್ ಕಿನ್ಯ ಅಧ್ಯಕ್ಷ ಲತೀಫ್ ದಾರಿಮಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಯ್ಯದ್ ಅಮೀರ್ ತಂಙಳ್ ದುಆ ನೆರವೇರಿಸಿದರು. ಶಾಸಕ, ವಿಧಾನ ಸಭೆ ಉಪನಾಯಕ ಯು.ಟಿ.ಖಾದರ್ ಟೈಲರಿಂಗ್ ಮೆಷಿನ್ ವಿತರಣೆಗೆ ಚಾಲನೆ ನೀಡಿದರು. ಕಿನ್ಯ ಸಮಸ್ತ ಕೇರಳ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಇಬ್ರಾಹಿಂ ಕೊಣಾಜೆ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ದಲ್ಲಿ ಕೆ ಎಲ್ ಉಮರ್ ದಾರಿಮಿ, ಜಂಇಯತುಲ್ ಮುಅಲ್ಲಿಮೀನ್ ಕಿನ್ಯ  ಕೋಶಾಧಿಕಾರಿ ಮುಹಮ್ಮದ್ ಹನೀಫ್ , ಸಮಸ್ತ ಕೇರಳ ಮದರಸ ಮ್ಯಾನೇಜ್ಮೆಂಟ್ ಕೋಶಾಧಿಕಾರಿ ಮೊಯ್ದಿನ್ ಕುಂಞಿ ಅಬ್ಬು ಕಿನ್ಯ , ಪ್ರಧಾನ ಕಾರ್ಯದರ್ಶಿ ಫಾರೂಕ್ ಕಿನ್ಯ, ಪುತ್ತು ಹಾಜಿ, ಮೊಯ್ದಿನಾಕ ಪಜೀರ್, ಅಬ್ದುಲ್ ಅಝೀಝ್ ಮನ್ನಾಣಿ, ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿಯ ಮೆನೇಜರ್  ಹುಸೈನ್ ದಾರಿಮಿ ರೆಂಜಲಾಡಿ, ಕೋಶಾಧಿಕಾರಿ ಅಬೂಸಾಲಿ ಹಾಜಿ, ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕಿನ್ಯ, ಮಂಗಳನಗರ ಮಸೀದಿ ಖತೀಬ್ ಆಸೀಫ್ ಅಲ್ ಅಝ್ ಅರಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ,  ಅಬ್ದುಲ್ ರಹಿಮಾನ್ ಫೈಝಿ,   ಹನೀಫ್ ಉಸ್ತಾದ್ ಬೊಳಂತೂರು, ವಾರ್ತಾ ಭಾರತಿ ಸಿಬ್ಬಂದಿ ಬಿ.ಎ.ತುಂಬೆ, ಉಚ್ಚಿಲ ಅಬ್ಬಾಸ್ ಹಾಜಿ, ಬಾವು ಉಕ್ಕುಡ, ಅಬ್ಬಾಸ್ ದಾರಿಮಿ ಕಿನ್ಯ  ಮತ್ತಿತರರು ಉಪಸ್ಥಿತರಿದ್ದರು.

ಮುಸ್ತಫಾ ಫೈಝಿ ಕಿನ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Similar News