ಭಾರತ್ ಜೋಡೊ ಯಾತ್ರೆ ಮುಗಿದು 45 ದಿನಗಳ ನಂತರ ರಾಹುಲ್ ಗಾಂಧಿಗೆ ಪ್ರಶ್ನೆ: ಕಾಂಗ್ರೆಸ್ ಕಿಡಿ

Update: 2023-03-19 13:00 GMT

ಹೊಸದಿಲ್ಲಿ: ರಾಹುಲ್ ಗಾಂಧಿ ಹೇಳಿಕೆಗೆ  ಭಾರತ್ ಜೋಡೊ ಯಾತ್ರೆ ಮುಗಿದ 45 ದಿನಗಳ ನಂತರ ಪೊಲೀಸರು ಈಗ ಏಕೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿರುವ  ಕಾಂಗ್ರೆಸ್ ನಾಯಕ ಪವನ್ ಖೇರಾ, 'ಸರಕಾರವು  ಭಯಭೀತವಾಗಿದೆ' ಎಂದು ಅವರು ಹೇಳಿದರು.

"ನಾವು ಘಟನೆಗಳಿಗೆ ನಿಯಮಾನುಸಾರ ಪ್ರತಿಕ್ರಿಯಿಸುತ್ತೇವೆ, ಆದರೆ ಈ ರೀತಿ ನಡೆದುಕೊಳ್ಳುವುದು ಸರಿಯೇ? ಭಾರತ್ ಜೋಡೋ ಯಾತ್ರೆ ಮುಗಿದು 45 ದಿನಗಳು ಕಳೆದಿವೆ. ಅವರು ಈಗ ಆಗ ನೀಡಿದ ಹೇಳಿಕೆಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದು ಸರಕಾರವು ಆತಂಕದಲ್ಲಿದೆ ಎಂದು ತೋರಿಸುತ್ತದೆ. ನನ್ನನ್ನು ಪ್ರವೇಶಿಸದಂತೆ ನಿಲ್ಲಿಸಲಾಯಿತು. ಏಕೆ? ಎಂದು  ಖೇರಾ  ಪ್ರಶ್ನಿಸಿದರು.

ಪ್ಯಾನ್-ಇಂಡಿಯಾ ಪಾದಯಾತ್ರೆ 'ಭಾರತ್ ಜೋಡೊ ಯಾತ್ರೆ' ವೇಳೆ ರಾಹುಲ್ ಗಾಂಧಿ ನೀಡಿರುವ  "ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ" ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಪ್ರಶ್ನಿಸಲು  ದಿಲ್ಲಿ ಪೊಲೀಸ್‌ನ ಉನ್ನತ ಅಧಿಕಾರಿಗಳು ರವಿವಾರ  ರಾಹುಲ್  ನಿವಾಸಕ್ಕೆ ತೆರಳಿದ್ದಾರೆ.

ಕಾಂಗ್ರೆಸ್‌ನ ನೇರ ಪ್ರತಿಸ್ಪರ್ಧಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದಿಲ್ಲಿ ಸಚಿವ ಸೌರಭ್ ಭಾರದ್ವಾಜ್,"ರಾಹುಲ್ ಗಾಂಧಿ ವಿರುದ್ಧ ಕೇಂದ್ರವು ತನಿಖಾ ಸಂಸ್ಥೆಗಳನ್ನು 'ದುರುಪಯೋಗ' ಮಾಡುತ್ತಿರುವುದು ತಪ್ಪು ಎಂದು ಹೇಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ'' ಎಂದು ಹೇಳಿದ್ದಾರೆ.

ಆದಾಗ್ಯೂ, ಎಎಪಿ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಗಳನ್ನು ಉಲ್ಲೇಖಿಸಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯಸಭಾ ಸಂಸದರಾದ ಅಭಿಷೇಕ್ ಮನು ಸಿಂಘ್ವಿ ,  ಜೈರಾಮ್ ರಮೇಶ್ ಸೇರಿದಂತೆ ಕಾಂಗ್ರೆಸ್ ನ ಪ್ರಮುಖ ನಾಯಕರು ಕೂಡ ರಾಹುಲ್  ಗಾಂಧಿಯವರ ನಿವಾಸವನ್ನು ತಲುಪಿದರು. ಪೊಲೀಸರ ಉಪಸ್ಥಿತಿಯನ್ನು ವಿರೋಧಿಸಿ ಪಕ್ಷದ ಮಾಜಿ ಅಧ್ಯಕ್ಷರ ಮನೆ ಬಳಿ ಜಮಾಯಿಸಿದ ಹಲವಾರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

Full View

Similar News