ಮಂಗಳೂರು: ಶೆಫರ್ಡ್ಸ್ ಮಾಂಟೆಸ್ಸರಿಯ ಪದವಿ ಸಮಾರಂಭ

Update: 2023-03-20 08:16 GMT

ಮಂಗಳೂರು, ಮಾ.20: ದಿ ಶೆಫರ್ಡ್ಸ್ ಇಂಟರ್ ನ್ಯಾಶನಲ್ ಅಕಾಡಮಿ ಅಧೀನದ ಶೆಫರ್ಡ್ಸ್ ಮಾಂಟೆಸ್ಸರಿಯ ಪದವಿ ಸಮಾರಂಭವು ಮಾ.18ರಂದು ನಗರದ ವಾಸ್ ಲೇನ್ ನಲ್ಲಿರುವ ಎಚ್ಐಎಫ್ ಆಡಿಟೋರಿಯಂನಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಸಲ್ಮಾ ಸುಹಾನಾ ಮಾತನಾಡಿ, ಶಾಲಾ ದಿನಗಳು ಬಾಲ್ಯದ ಅತ್ಯುತ್ತಮ ದಿನಗಳು ಎಂದು ಸ್ಮರಿಸಿದರು.

ಇಂದು ಮಕ್ಕಳು ಮೊಬೈಲ್ ಗೀಳಿಗೆ ಬಲಿ ಬೀಳುತ್ತಿದ್ದು, ಪೋಷಕರು ಈ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದ ಅವರು, ಮಕ್ಕಳ ಆಸಕ್ತಿಯ ವಿಷಯಗಳಲ್ಲಿ ಅವರನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ನಿಸಾರ್ ಮಾತನಾಡಿ, ಪ್ರಾಥಮಿಕ, ಪ್ರೌಢಶಾಲೆ ಅಥವಾ ಪದವಿಯಲ್ಲಿ ಪದವಿ ಪಡೆಯುವ ದಿನಕ್ಕೆ ಮುಕ್ತಾಯಗೊಳ್ಳಬಾರದು. ಉನ್ನತ ಶಿಕ್ಷಣ ಪಡೆಯಲು ಅದು ರಹದಾರಿಯಾಗಬೇಕು ಎಂದರು.

ಪುಟ್ಟ ಪದವೀಧರರು ಪದವಿ ಗೀತೆಯನ್ನು ಪ್ರದರ್ಶಿಸಿದರು. ಮಾಂಟೆಸ್ಸರಿ ವಿದ್ಯಾರ್ಥಿಗಳ ಪಯಣವನ್ನು ದೃಶ್ಯರೂಪದಲ್ಲಿ ಪ್ರಸ್ತುತಪಡಿಸಲಾಯಿತು.

ಇದೇವೇಳೆ ಮುಖ್ಯ ಅತಿಥಿಗಳು, ಅಧ್ಯಕ್ಷರು ಮತ್ತು ಪ್ರಾಂಶುಪಾಲರು ಪುಟಾಣಿ ವಿದ್ಯಾರ್ಥಿಗಳಿಗೆ ಪದವಿ ಪತ್ರಗಳನ್ನು ನೀಡಿ ಸನ್ಮಾನಿಸಿದರು

ಟ್ರಸ್ಟಿಗಳಾದ ಶಾಜಿದ್ ಎ.ಕೆ., ಮುಹಮ್ಮದ್ ರಿಝ್ವಾನ್, ಪ್ರಾಂಶುಪಾಲ ಲುಬ್ನಾ ಬಾನು ಮತ್ತು ಸಿಎಒ ಹಸನ್ ಯೂಸುಫ್ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿಗಳ ಪೋಷಕರ ಪರವಾಗಿ ಶೆಹಝೀನ್ ಮಾತನಾಡಿದರು.

ಸಿಮ್ರಾನ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಸುಮಯ್ಯ ಶೇಖ್ ಮತ್ತು ಸಮೀರ ಶರೀಫ್ ಕಾರ್ಯಕ್ರಮವನ್ನು ಸಂಯೋಜಿಸಿದರು.

Similar News