ತೋಡಾರು ‘ಇಮಾಂ’ ಸಂಘಟನೆಯಿಂದ ತರಬೇತಿ ಶಿಬಿರ

Update: 2023-03-21 13:04 GMT

ತೋಡಾರು: ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ಹಳೆ ವಿದ್ಯಾರ್ಥಿಗಳಾದ ಮ್‌ಅಬರಿ ವಿದ್ವಾಂಸರ ಒಕ್ಕೂಟ ‘ಇಮಾಂ’ಸಂಘಟನೆಯ ವತಿಯಿಂದ ‘ಅಪ್ನಾ ಸಪ್ನಾ-2023 ದ್ವಿದಿನ ತರಬೇತಿ ಶಿಬಿರ ನಡೆಯಿತು.

ಸಂಸ್ಥೆಯಿಂದ ಬಿರುದು ಪಡೆದ ಸುಮಾರು 60 ಮ್‌ಅಬರಿ ವಿದ್ವಾಂಸರು ಪಾಲ್ಗೊಂಡ ಶಿಬಿರದಲ್ಲಿ ಐಎಎಸ್ ಅಧಿಕಾರಿ ಶಾಹಿದ್ ತಿರುವಳ್ಳೂರ್, ಡಾ.ಕೆ.ಟಿ. ಹಾರಿಸ್ ಹುದವಿ, ಅಸ್ಲಂ ಫೈಝಿ ಬೆಂಗಳೂರು, ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ್ ಜೈನ್ ರೆಂಜಾಳ, ಬಶೀರ್ ಅಸ್‌ಹದಿ ಕಣ್ಣೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಷಯ ಮಂಡಿಸಿದರು.

ಉನ್ನತ ಶಿಕ್ಷಣ, ಉದ್ಯೋಗ, ವ್ಯಕ್ತಿತ್ವ ವಿಕಸನ, ನಾಯಕತ್ವ ಸೇರಿದಂತೆ ವಿವಿಧ ವಿಷಯಗಳನ್ನು ಕೇಂದ್ರೀಕರಿಸಿ ಚರ್ಚಾಗೋಷ್ಠಿ, ಸಂವಾದ ಮತ್ತು ಆಧ್ಯಾತ್ಮಿಕ ಸಾಂಸ್ಕೃತಿಕ ಸಂಗಮಗಳು ನಡೆಯಿತು.

ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘಟನೆಯ ಭವಿಷ್ಯದ ಚಟುವಟಿಕೆಗಳ ಕುರಿತು ಕಾರ್ಯಯೋಜನೆಗಳನ್ನು ರೂಪಿಸಲಾಯಿತು. ಈ ಸಂದರ್ಭ ಸಂಘಟನೆ ರಂಗ ಹಾಗೂ ಸಾಹಿತ್ಯ ರಂಗದಲ್ಲಿ ಸಾಧನೆಗೈದ ಸದಸ್ಯರನ್ನು ಗೌರವಿಸಲಾಯಿತು.

Similar News