ಅಸ್ಸಾಂ: ಯುವ ಕವಯಿತ್ರಿ ಮೇಲಿನ ಯುಎಪಿಎ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2023-03-22 15:30 GMT

ಹೊಸದಿಲ್ಲಿ: ಅಸ್ಸಾಂನ ಕೆಳ ನ್ಯಾಯಾಲಯವೊಂದು ಯುವ ಅಸ್ಸಾಮಿ ಕವಯಿತ್ರಿ ಬರ್ಶಶ್ರೀ ಬುರಾಗೊಹೈನ್ ಅವರ ವಿರುದ್ಧ ಅಸ್ಸಾಂ ಪೊಲೀಸರು ದಾಖಲಿಸಿದ್ದ ಯುಎಪಿಎ ಪ್ರಕರಣವನ್ನು ರದ್ದುಗೊಳಿಸಿದೆ. 

ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್, ULFA ಜೊತೆ ಸೇರಿ 'ರಾಷ್ಟ್ರದ ವಿರುದ್ಧ ದಂಗೆಯ ಕೃತ್ಯ' ಎಸಗಿದ್ದಾಳೆ ಎಂಬ ರಾಜ್ಯ ಪೊಲೀಸರ ಆರೋಪವನ್ನು ಹೈಕೋರ್ಟ್‌ ತಳ್ಳಿ ಹಾಕಿದೆ. 

ಮೇ 2022 ರಲ್ಲಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದ ನಾಗರಿಕರ ಮೇಲೆ ತನ್ನ ಶಿಸ್ತುಕ್ರಮವನ್ನು ಜರುಗಿಸಿದ್ದು, ಅದರಂತೆ, ಫೇಸ್‌ಬುಕ್‌ನಲ್ಲಿ ಕವಿತೆ ಬರೆದಿದ್ದಕ್ಕಾಗಿ 19 ವರ್ಷದ ವಿದ್ಯಾರ್ಥಿನಿಯನ್ನು ಬಂಧಿಸಿತ್ತು. ಯುವಜನರು ಉಲ್ಫಾಗೆ ಸೇರಲು ಆಕೆಯ ಕವಿತೆ ಕರೆ ನೀಡಿದೆ ಎಂದು ಪೊಲೀಸರು ಆರೋಪಿಸಿದ್ದರು. 

ಜೋರ್ಹತ್ ಜಿಲ್ಲೆಯ ಡಿಸಿಬಿ ಕಾಲೇಜಿನಲ್ಲಿ ಗಣಿತಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಬರ್ಷಶ್ರೀ ಬಂಧನ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಆಕೆಯನ್ನು ಬಿಡುಗಡೆ ಮಾಡುವಂತೆ ಸಾರ್ವಜನಿಕರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಮನವಿ ಸಲ್ಲಿಸಿದ್ದರು. ಆದಾಗ್ಯೂ, ನಿಷೇಧಿತ ಶಸ್ತ್ರಸಜ್ಜಿತ ಸಂಘಟನೆಗೆ ಜನರನ್ನು ಸೇರಿಸಲು ಆಕೆ ಪ್ರಯತ್ನಿಸುತ್ತಿದ್ದಾಳೆ ಎಂದು ಶರ್ಮಾ ಆರೋಪಿಸಿದ್ದರು.

Similar News