ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಕನ್ನಡ ಸಾಂಸ್ಕೃತಿಕ ಭವನಕ್ಕೆ ಶಿಲಾನ್ಯಾಸ

Update: 2023-03-23 14:41 GMT

ಮಂಗಳೂರು, ಮಾ.23; ಹಿರಿಯ ಸಾಹಿತಿ ಕಯ್ಯಾರ ಕಿಂಞಣ್ಣ ರೈ ನೆನಪಿನಲ್ಲಿ ಕಾಸರಗೋಡಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಕನ್ನಡ ಸಾಂಸ್ಕೃತಿಕ ಭವನಕ್ಕೆ ಗುರುವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಶಿಲಾನ್ಯಾಸ ನೆರವೇರಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಕವಿತಾ ಕುಟೀರ (ರಿ) ಪೆರಡಾಲ ಕಾಸರಗೋಡು ಇವುಗಳ  ಸಹಯೋಗದಲ್ಲಿ ಕಯ್ಯಾರ ಕಿಂಞಣ್ಣ ರೈಯವರ ಗ್ರಾಮವಾದ ಕಾಸರಗೋಡಿನ ಕಲ್ಲಕಳಿಯ ಬತ್ತೇರಿಯಲ್ಲಿ ನೆರವೇರಿಸಲಾಯಿತು.

ಬಳಿಕ ಮಾತನಾಡಿದ ಡಾ. ಸಿ.ಸೋಮಶೇಖರ್ ಈ ಭವನ ನಿರ್ಮಾಣಕ್ಕೆ 2 ಕೋ.ರೂ. ಅನುದಾನವನ್ನು ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗಿದೆ. ಕಿಂಞಣ್ಣ ರೈಯ ಕುಟುಂಬದವರು 2 ಎಕರೆ ನಿವೇಶನವನ್ನು ಉಚಿತವಾಗಿ ದಾನ ಮಾಡಿದ್ದಾರೆ. ಈವರೆಗೆ ಪ್ರಾಧಿಕಾರವು 10 ಕೋ.ರೂ.ಗೂ ಹೆಚ್ಚು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುದಾನ ಒದಗಿಸಿದೆ ಎಂದು ತಿಳಿಸಿದರು.

ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾಸರಗೋಡು ಶಾಸಕ ಎಂಎ ನೆಲ್ಲಿಕುನ್ನು, ಕವಿತಾ ಕುಟೀರ ಪೆರಡಾಲದ ಸದಸ್ಯರಾದ ಡಾ.ಮೋಹನ್ ಆಳ್ವ, ಉದ್ಯಮಿ  ಸದಾಶಿವ ಶೆಟ್ಟಿ  ಕನ್ಯಾನ, ಕಾಸರಗೋಡು ಜಿಪಂ ಮಾಜಿ ಅಧ್ಯಕ್ಷ ಎ.ಜಿ.ಸಿ ಬಶೀರ್,ಬದಿಯಡ್ಕ ಪಂಚಾಯತ್‌ನ ಶಾಂತಾ ಬಾರಡ್ಕ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ,ದ.ಕ.ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್ ವಿ, ದ.ಕ.ಜಿಲ್ಲಾಧಿಕಾರಿ ಕಚೇರಿಯ ಅಭಿತ್ ಕೆ.ಎ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Similar News