ED, CBI ಮುಖ್ಯಸ್ಥರಿಗೆ ಸಣ್ಣಪುಟ್ಟ ವಿಸ್ತರಣೆಗಳು ಅವುಗಳ ಸ್ವಾತಂತ್ರ್ಯಕ್ಕೆ ಹಾನಿಯೆಸಗುತ್ತವೆ: ಅಮಿಕಸ್‌ ಕ್ಯುರೇ

Update: 2023-03-24 12:01 GMT

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ಮುಖ್ಯಸ್ಥರಿಗೆ ಕೇಂದ್ರ ಸರ್ಕಾರ ನೀಡುವ ಸಣ್ಣಪುಟ್ಟ ವಿಸ್ತರಣೆಗಳು  ಈ ಏಜನ್ಸಿಗಳ ಸ್ವಾತಂತ್ರ್ಯ ಮತ್ತು ಸಮಗ್ರತೆಗೆ ಹಾನಿಯುಂಟು ಮಾಡುತ್ತವೆ ಎಂದು  ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್‌ ಕುಮಾರ್‌ ಮಿಶ್ರಾ ಅವರ ಸೇವಾವಧಿ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಸಹಾಯ ಮಾಡುತ್ತಿರುವ ಅಮಿಕಸ್‌ ಕ್ಯುರೇ ಮತ್ತು ಹಿರಿಯ ವಕೀಲ ಕೆ ವಿ ವಿಶ್ವನಾಥನ್ ಅವರು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ವಿಕ್ರಮ್‌ ನಾಥ್‌ ಮತ್ತು ಸಂಜಯ್‌ ಕರೋಲ್‌ ಅವರ ಪೀಠಕ್ಕೆ ತಿಳಿಸಿದ್ದಾರೆ.

ಇಂದು ಒಂದು ಅಧಿಕಾರಿ ಅಥವಾ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ, ತನಿಖಾ ಏಜನ್ಸಿಗಳ ಮೇಲೆ ಪ್ರಭಾವ ಬೀರಬಾರದು ಮತ್ತು ಅವುಗಳು ತಮ್ಮ ತನಿಖೆಯನ್ನು ಸ್ವತಂತ್ರವಾಗಿ ನಡೆಸಬೇಕೆಂಬ ವಿಚಾರಕ್ಕೆ  ಸಂಬಂಧಿಸಿದ್ದಾಗಿದೆ ಎಂದು ಅವರು ಹೇಳಿದರು.

"ಅವಧಿ ವಿಸ್ತರಣೆಯ ನಿರೀಕ್ಷೆಯು ಸ್ವಜನಪಕ್ಷಪಾತಕ್ಕೆ ಕಾರಣವಾಗುತ್ತದೆ. ಸೇವಾವಧಿಯ ಅಂತ್ಯದ ವೇಳೆಗೆ ವಿಸ್ತರಣೆ ದೊರೆಯುತ್ತದೆ ಎಂಬ ಕಾರಣಕ್ಕೆ ಯಾವುದೇ ವಿಚಾರದಲ್ಲಿ ಯಾರಾದರೂ ರಾಜಿ ಮಾಡಿಕೊಳ್ಳುತ್ತಾರೆ ಎಂದು ಅಂದುಕೊಳ್ಳಬಾರದು ಎಂದು ಮಿಶ್ರಾ ಹೇಳಿದರು.

ಮಿಶ್ರಾ ಅವರಿಗೆ ನೀಡಿದ ವಿಸ್ತರಣೆ ಅಕ್ರಮವಾಗಿದೆ ಎಂದು ಕಳೆದ ತಿಂಗಳು ವಿಶ್ವನಾಥನ್‌ ಹೇಳಿದ್ದರು. ಅದೇ ದಿನ  ಮೌಖಿಕವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ ತಾನು ವಿಪಕ್ಷಗಳ ಸದಸ್ಯರಾಗಿರುವ ಅರ್ಜಿದಾರರ ಕುರಿತು ಯೋಚಿಸದೆ ಈ ಪ್ರಕರಣವನ್ನು ಕೇವಲ ಕಾನೂನು ಮತ್ತು ನ್ಯಾಯಸಮ್ಮತತೆಯ ಆಧಾರದಲ್ಲಿ ಇತ್ಯರ್ಥಪಡಿಸುವುದಾಗಿ ತಿಳಿಸಿತ್ತು.

62 ವರ್ಷದ ಮಿಶ್ರಾ ಅವರನ್ನು ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ಎರಡು ವರ್ಷದ ಅವಧಿಗೆ ನವೆಂಬರ್‌ 19, 2018 ರಂದು ನೇಮಕಗೊಳಿಸಲಾಗಿತ್ತು, ನಂತರ ನವೆಂಬರ್‌ 13, 2020 ಆದೇಶದ ಮೇರೆಗೆ  ಅವರ ಎರಡು ವರ್ಷದ ಸೇವಾವಧಿಯಲ್ಲಿ ಮೂರು ವರ್ಷಗಳಿಗೆ ವಿಸ್ತರಿಸಲಾಗಿತ್ತು. ನಂತರ ಆವರಿಗೆ ಇನ್ನೊಂದು ವರ್ಷದ  ವಿಸ್ತರಣೆ ನೀಡಲಾಗಿತ್ತು., ಇದರನ್ವಯ, 1984 ಬ್ಯಾಚಿನ ಅಧಿಕಾರಿಯಾಗಿರುವ ಮಿಶ್ರಾ ಅವರು ನವೆಂಬರ್‌ 18, 2023 ತನಕ ಅಧಿಕಾರದಲ್ಲಿರುತ್ತಾರೆ.

Similar News