ಸಿರಿಯಾ: ಅಮೆರಿಕದ ವಾಯುದಾಳಿಯಲ್ಲಿ 8 ಮಂದಿ ಮೃತ್ಯು

Update: 2023-03-24 17:01 GMT

ಬೈರೂತ್, ಮಾ.24: ಪೂರ್ವ ಸಿರಿಯಾದಲ್ಲಿ ಡ್ರೋನ್ ದಾಳಿಗೆ ಅಮೆರಿಕದ ಗುತ್ತಿಗೆದಾರ ಮೃತಪಟ್ಟು 5 ಮಂದಿ ಯೋಧರು ಗಾಯಗೊಂಡಿದ್ದು ಇದಕ್ಕೆ ಪ್ರತಿಯಾಗಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ 8 ಮಂದಿ ಮೃತಪಟ್ಟಿರುವುದಾಗಿ ಮಾನವ ಹಕ್ಕುಗಳ ನಿಗಾ ಸಂಸ್ಥೆಯ ಸಿರಿಯಾ ವಿಭಾಗದ ಹೇಳಿಕೆ ತಿಳಿಸಿದೆ.

ಪೂರ್ವ ಸಿರಿಯಾದಲ್ಲಿ ಇರಾನ್ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾಪ್ರ್ಸ್(ಐಆರ್ಜಿಸಿ)ಗೆ ಸಂಯೋಜಿತವಾಗಿರುವ ಗುಂಪಿನ ವಿರುದ್ಧ ನಿಖರವಾದ ವಾಯುದಾಳಿ ನಡೆಸುವಂತೆ ಅಧ್ಯಕ್ಷ ಜೋ ಬೈಡನ್ ಅವರ ಆದೇಶದಂತೆ ಸೂಚಿಸಲಾಗಿದೆ. ಈ ಗುಂಪು ಇತ್ತೀಚಿನ ದಿನಗಳಲ್ಲಿ ಸಿರಿಯಾದಲ್ಲಿ ಸಮ್ಮಿಶ್ರ ಪಡೆಗಳ ವಿರುದ್ಧ ನಡೆಸಿರುವ ಸರಣಿ ದಾಳಿಗೆ ಪ್ರತಿಯಾಗಿ ವಾಯುದಾಳಿ ನಡೆಸಲಾಗಿದೆ  ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಇರಾನ್ ಸೇನೆಯ ಭಾಗವಾಗಿರುವ ಐಆರ್ಜಿಸಿಯನ್ನು ಅಮೆರಿಕ ಭಯೋತ್ಪಾದಕ ಗುಂಪು ಎಂದು ನಿಯೋಜಿಸಿದೆ.

ಈಶಾನ್ಯ ಸಿರಿಯಾದಲ್ಲಿ ಡ್ರೋನ್ ಬಳಸಿ ನಡೆಸಿದ ದಾಳಿಯಲ್ಲಿ ಹಸಕೆಹ್ ನಗರದ ಬಳಿಯ ಸಮ್ಮಿಶ್ರ ಪಡೆಗಳ ನಿರ್ವಹಣೆ ಕೇಂದ್ರಕ್ಕೆ ಹಾನಿಯಾಗಿದ್ದು ಅಲ್ಲಿ ಕರ್ತವ್ಯದಲ್ಲಿದ್ದ ಅಮೆರಿಕದ ಗುತ್ತಿಗೆದಾರ ಮೃತಪಟ್ಟಿದ್ದಾನೆ. ಐದು ಮಂದಿ ಗಾಯಗೊಂಡಿದ್ದು ಇದು ಇರಾನ್ ಮೂಲದ ಡ್ರೋನ್ ಎಂದು ದೃಢಪಟ್ಟಿರುವುದಾಗಿ ಪೆಂಟಗಾನ್ ಹೇಳಿದೆ.

ಇದಕ್ಕೆ ಪ್ರತಿಯಾಗಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ 6 ಇರಾನ್ ಪರ ಹೋರಾಟಗಾರರ ಸಹಿತ 8 ಹೊರಾಟಗಾರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Similar News