ಮಹಾರಾಷ್ಟ್ರದಲ್ಲಿ 343 ಮಂದಿಗೆ ಕೋವಿಡ್ ದೃಢ: ಥಾಣೆಯಲ್ಲಿ ಮೂವರು ಮೃತ್ಯು

Update: 2023-03-25 04:55 GMT

ಮುಂಬೈ: ಸಮೀಪದ ಥಾಣೆ ಜಿಲೆಯಲ್ಲಿ ಕೋವಿಡ್ ಸಂಬಂಧಿ ಆರೋಗ್ಯ ಸಂಕೀರ್ಣತೆಯಿಂದ ಮೂವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ವಿವಿಧೆಡೆ 343 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ರಾಜ್ಯದ ಕೋವಿಡ್ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಫೆಬ್ರುವರಿಯಲ್ಲಿ ಕೋವಿಡ್ ಸಂಬಂಧಿ ಸಾವು ಶೂನ್ಯ ಇತ್ತು. ಆದರೆ ಮಾರ್ಚ್‌ನಲ್ಲಿ ಈಗಾಗಲೇ 13 ಕೋವಿಡ್ ಸಂಬಂಧಿ ಸಾವು ವರದಿಯಾಗಿದೆ. ಮುಂಬೈನಲ್ಲಿ ಈ ಬಾರಿ ಯಾವುದೇ ಕೋವಿಡ್ ಸಾವು ಸಂಭವಿಸಿಲ್ಲವಾದರೂ, ದೈನಿಕ ಪ್ರಕರಣಗಳ ಸಂಖ್ಯೆ ಶುಕ್ರವಾರ 86ಕ್ಕೇರಿದೆ. ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟವರ ಸಂಖ್ಯೆ ಕಳೆದ ತಿಂಗಳೂ ವರೆಗೂ ಒಂದು ಇದ್ದುದು ಇದೀಗ 33ಕ್ಕೇರಿದೆ.

ಮುಂಬೈನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 453ಕ್ಕೇರಿದ್ದು, 500ರ ಸನಿಹದಲ್ಲಿದೆ. ರಾಜ್ಯಾದ್ಯಂತ ಒಟ್ಟು 1763 ಸಕ್ರಿಯ ಪ್ರಕರಣಗಳು ಇವೆ. ಭಾರತೀಯ ವಿಜ್ಞಾನಿಗಳು ಈ ಪ್ರಬೇಧದ ಜೆನೋಮ್ ಸೀಕ್ವೆನ್ಸಿಂಗ್ ಸಂಶೋಧನೆ ಕೈಗೊಂಡಿದ್ದು, ಹೊಸ ಒಮಿಕ್ರಾನ್ ಉಪಪ್ರಬೇಧ ಎಕ್ಸ್‌ಬಿಬಿ.1.16 ಅನ್ನು ಪತ್ತೆ ಮಾಡಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚಲು ಇದು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

Similar News