2022ರಲ್ಲಿ ಜಗತ್ತಿನಾದ್ಯಂತ 13 ʼಸಂಶಯಾಸ್ಪದʼ ಕ್ರಿಕೆಟ್ ಪಂದ್ಯಗಳ ಆಯೋಜನೆ: ಸ್ಪೋರ್ಟ್‌ ರಡಾರ್ ವರದಿ

Update: 2023-03-25 07:20 GMT

ಹೊಸ ದಿಲ್ಲಿ: ಸ್ಪೋರ್ಟ್‌ ರಡಾರ್ ಇಂಟಿಗ್ರಿಟಿ ಸರ್ವೀಸಸ್ ವರದಿಯ ಪ್ರಕಾರ, 2022ರಲ್ಲಿ ಜಗತ್ತಿನಾದ್ಯಂತ 13 ಸಂಶಯಾಸ್ಪದ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು indianexpress.com ವರದಿ ಮಾಡಿದೆ.

ಸ್ಪೋರ್ಟ್‌ರಡಾರ್ ಇಂಟಿಗ್ರಿಟಿ ಸರ್ವೀಸಸ್ ಘಟಕವು, ಅಕ್ರಮ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಹಾಗೂ ಕ್ರೀಡೆಗಳಲ್ಲಿನ ಇನ್ನಿತರ ಬಗೆಯ ಭ್ರಷ್ಟಾಚಾರಗಳ ಕುರಿತು ವಿಶ್ಲೇಷಣೆ ಮಾಡುವ ಅರ್ಹ ಬದ್ಧತೆಯ ತಜ್ಞರನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ತಂಡವಾಗಿದೆ.

ತನ್ನ 28 ಪುಟಗಳ "Betting, Corruption and Match-Fixing' ವರದಿಯಲ್ಲಿ, ಈ ಹಿಂದೆಂದೂ ಇಲ್ಲದಂತೆ 92 ದೇಶಗಳ 12 ಕ್ರೀಡಾ ಪ್ರಕಾರಗಳಲ್ಲಿ 1212 ಸಂಶಯಾಸ್ಪದ ಪಂದ್ಯಗಳು ನಡೆದಿವೆ ಎಂದು ಪ್ರತಿಪಾದಿಸಿದೆ.

ಈ ಸಂಸ್ಥೆಯು ಪಂದ್ಯದ ವೇಳೆ ನಡೆಯುವ ಸಂಶಯಾಸ್ಪದ ಚಟುವಟಿಕೆಗಳನ್ನು ಪತ್ತೆ ಹಚ್ಚಲು Universal Fraud Detection System ಎಂಬ ಆ್ಯಪ್ ಬಳಸುತ್ತದೆ.

ಆಸಕ್ತಿಕರ ಸಂಗತಿಯೆಂದರೆ, 12 ಕ್ರೀಡಾ ಪ್ರಕಾರಗಳಲ್ಲಿ ಕ್ರಿಕೆಟ್‌ನಲ್ಲಿ ಮಾತ್ರ 13 ಸಂಶಯಾಸ್ಪದ ಪಂದ್ಯಗಳು ನಡೆದಿದ್ದು, ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಹೀಗಿದ್ದೂ ಒಂದೇ ವರ್ಷದಲ್ಲಿ ಅತಿ ಹೆಚ್ಚು ಅಕ್ರಮ ಪಂದ್ಯಗಳು ನಡೆದಿರುವ ಕ್ರೀಡಾ ಪ್ರಕಾರಗಳ ಪೈಕಿ ಕ್ರಿಕೆಟ್ ಮಾತ್ರ ಸೇರಿದೆ.

Similar News