​ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆ : ನಿಟ್ಟೆ ತಂಡ ಪ್ರಥಮ

Update: 2023-03-25 13:38 GMT

ಮಂಗಳೂರು: ಇತ್ತೀಚೆಗೆ ನವಮುಂಬಯಿಯ ಪಿಎಚ್‌ಸಿಇಟಿ ಕಾಲೇಜಿನಲ್ಲಿ ನಡೆದ ಹ್ಯಾಕೋವರ್ ಪ್ರೋ 1.0 ಎಂಬ 3 ದಿನಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ‘ಟಿ 3 ಟ್ರೈಬ್’ ಎಂಬ ತಂಡ ಪ್ರಥಮ ಬಹುಮಾನ ಸ್ಥಾನ ಪಡೆದುಕೊಂಡಿದೆ.

ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಾದ ಸ್ವಸ್ತಿಕ್ ಶೆಟ್ಟಿ, ನಾಗರಾಜ್ ಪಂಡಿತ್ ಮತ್ತು ತನಿಶ್ಕಾ ರಾವ್ ತಂಡವನ್ನು ಪ್ರತಿನಿಧಿಸಿದ್ದು, ಬಹುಮಾನವು ಪ್ರಶಸ್ತಿಯೊಂದಿಗೆ 30,000ರೂ. ನಗದು ಬಹುಮಾನ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.

Similar News