×
Ad

ಇರಾನ್‍ಗೆ ಬೈಡನ್ ಎಚ್ಚರಿಕೆ

Update: 2023-03-25 22:45 IST

ವಾಷಿಂಗ್ಟನ್, ಮಾ.25: ಇರಾನ್ ಪ್ರತೀಕಾರದ ದಾಳಿಗೆ ಇಳಿದರೆ ತಕ್ಕಶಾಸ್ತಿ ಮಾಡುವುದು ಅನಿವಾರ್ಯವಾಗಲಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ಪೂರ್ವ ಸಿರಿಯಾದಲ್ಲಿ ಇರಾನ್‍ನ  ಡ್ರೋನ್ ದಾಳಿಯಲ್ಲಿ ಅಮೆರಿಕದ ಮತ್ತೊಬ್ಬ ಪ್ರಜೆ ಗಾಯಗೊಂಡಿರುವುದಾಗಿ ಅಮೆರಿಕದ ಸೇನೆ ಹೇಳಿದೆ. ಡ್ರೋನ್ ದಾಳಿಯ ಬಳಿಕ ಸಿರಿಯಾದಲ್ಲಿ ಇರಾನ್‍ನ ರೆವೊಲ್ಯೂಷನರಿ ಗಾಡ್ರ್ಸ್ ಪಡೆಯನ್ನು ಗುರಿಯಾಗಿಸಿ ಅಮೆರಿಕ ಪ್ರತಿದಾಳಿ ನಡೆಸಿತ್ತು.

`ಅಮೆರಿಕ ಎಂದಿಗೂ ತಪ್ಪು ಮಾಡುವುದಿಲ್ಲ. ನಾವು ಇರಾನ್ ಜತೆ ಸಂಘರ್ಷ ಬಯಸುತ್ತಿಲ್ಲ. ಆದರೆ ನಮ್ಮ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲೂ ನಾವು ಸಿದ್ಧರಿದ್ದೇವೆ' ಎಂದು ಬೈಡನ್ ಹೇಳಿದ್ದಾರೆ.

Similar News