×
Ad

ಹೈದರಾಬಾದ್: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Update: 2023-03-26 13:05 IST

ಹೈದರಾಬಾದ್: ಹೈದರಾಬಾದ್ ನಗರದ ಕುಶೈಗುಡಾ ಪ್ರದೇಶದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮೃತರನ್ನು ಸತೀಶ್, ಅವರ ಪತ್ನಿ ವೇದಾ ಹಾಗೂ  ಅವರ ಇಬ್ಬರು ಮಕ್ಕಳಾದ ನಿಶಿಕೇತ್ (9) ಮತ್ತು ನಿಹಾಲ್ (5) ಎಂದು ಗುರುತಿಸಲಾಗಿದೆ.

ಘಟನೆ ಶುಕ್ರವಾರ ರಾತ್ರಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಶನಿವಾರ ಮಧ್ಯಾಹ್ನ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

"ಕಂದಿಗುಡ ಪ್ರದೇಶದಲ್ಲಿ ತಂದೆ, ತಾಯಿ ಹಾಗೂ  ಅವರ ಇಬ್ಬರು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಇಬ್ಬರೂ ಮಕ್ಕಳು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ (ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ) ಅವರಿಗೆ ಚಿಕಿತ್ಸೆ ನೀಡಲಾಗಿದ್ದರೂ, ಮಕ್ಕಳು ಚೇತರಿಸಿಕೊಂಡಿರಲಿಲ್ಲ.  ಪೋಷಕರು ಖಿನ್ನತೆಗೆ ಜಾರಿದ್ದರು, ಅವರು (ಕುಟುಂಬ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ ಆದರೆ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂದಿದೆ. ಮೃತರು ಸತೀಶ್, ವೇದಾ, ನಿಶಿಕೇತ್ ಹಾಗೂ  ನಿಹಾಲ್ ಎಂದು ಗುರುತಿಸಲಾಗಿದೆ"ಎನ್ನುವುದಾಗಿ  ಕುಶೈಗುಡ ಪೊಲೀಸ್ ಠಾಣೆಯ  ಪೊಲೀಸ್ ಇನ್ಸ್ಪೆಕ್ಟರ್ ಪಿ. ವೆಂಕಟೇಶ್ವರಲು ತಿಳಿಸಿದ್ದಾರೆ.

Similar News