ಬ್ರಿಟನ್: ಲಾಫಿಂಗ್ ಗ್ಯಾಸ್ ನಿಷೇಧಕ್ಕೆ ನಿರ್ಧಾರ

Update: 2023-03-27 17:21 GMT

ಲಂಡನ್, ಮಾ.27: ಯುವಜನರು ಮಾದಕವಸ್ತುವಿನ ರೂಪದಲ್ಲಿ ಬಳಸುವ  ಲಾಫಿಂಗ್ ಗ್ಯಾಸ್(ನಗೆ ಅನಿಲ) ಎಂದೇ ಸಾಮಾನ್ಯವಾಗಿ ಕರೆಯಲ್ಪಡುವ ನೈಟ್ರಸ್ ಆಕ್ಸೈಡ್ ಅನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಬ್ರಿಟನ್ ಸರಕಾರ ಹೇಳಿದೆ.

16ರಿಂದ 24ರ ವಯಸ್ಸಿನ ಯುವಜನರು ಅತ್ಯಧಿಕ ಬಳಸುವ ಮಾದಕವಸ್ತುಗಳಲ್ಲಿ ಲಾಫಿಂಗ್ ಗ್ಯಾಸ್ಗೆ ಎರಡನೇ ಸ್ಥಾನವಿದೆ. ದೇಶದಲ್ಲಿ ಸಾಮಾಜಿಕ ವಿರೋಧಿ ಕೃತ್ಯಗಳು ಹಾಗೂ ವರ್ತನೆಯ ವಿರುದ್ಧ ಕೈಗೊಳ್ಳಲಾಗುವ ಕಾರ್ಯಾಚರಣೆಯ ಅಂಗವಾಗಿ ಈ ಕ್ರಮಕ್ಕೆ ನಿರ್ಧರಿಸಲಾಗಿದ್ದು ಇನ್ನು ಮುಂದೆ ಲಾಫಿಂಗ್ ಗ್ಯಾಸ್ ಅನ್ನು ಹೊಂದಿರುವುದು ಕ್ರಿಮಿನಲ್ ಅಪರಾಧವಾಗಲಿದೆ. 

ಲಾಫಿಂಗ್ ಗ್ಯಾಸ್ನಿಂದ ಆರೋಗ್ಯ ಮತ್ತು ಸಾಮಾಜಿಕ ಹಾನಿಗಳ ಹೆಚ್ಚಳ (ವಿಶೇಷವಾಗಿ ಯುವಜನರಲ್ಲಿ)ದ ಬಗ್ಗೆ ಸರಕಾರಕ್ಕೆ ಕಳವಳವಿದೆ. ಆದ್ದರಿಂದ ಇದೇ ಮೊದಲ ಬಾರಿ, ನೈಟ್ರಸ್ ಆಕ್ಸೈಡ್ ಅನ್ನು ಹೊಂದಿರುವುದು ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಬ್ರಿಟನ್ ಸರಕಾರದ ಹೇಳಿಕೆ ತಿಳಿಸಿದೆ.

Similar News