653 ಬುಲೆಟ್‌ಗಳನ್ನು ಕಳೆದುಕೊಂಡ ಉತ್ತರ ಕೊರಿಯಾ ಯೋಧ: ನಗರದಾದ್ಯಂತ ಲಾಕ್‌ಡೌನ್ ವಿಧಿಸಿದ ಕಿಮ್ ಜಾಂಗ್ ಉನ್

Update: 2023-03-28 08:27 GMT

ಪ್ಯಾಂಗ್ಯಾಂಗ್: ಸೇನಾ ಪಡೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಯೋಧನೊಬ್ಬ 653 ಬುಲೆಟ್ ಕಳೆದುಕೊಂಡಿರುವುದರಿಂದ, ಅವು ಪತ್ತೆಯಾಗುವವರೆಗೂ ಹೈಸನ್ ನಗರದಾದ್ಯಂತ ಉತ್ತರ ಕೊರಿಯಾ (North Korea) ಅಧ್ಯಕ್ಷ ಕಿಮ್ ಜಾಂಗ್ ಉನ್ (Kim Jong Un) ಲಾಕ್‌ಡೌನ್ ವಿಧಿಸಿದ್ದಾರೆ ಎಂದು ವರದಿಯಾಗಿದೆ. ಕಳೆದು ಹೋಗಿರುವ ಬುಲೆಟ್‌ಗಳನ್ನು ಪತ್ತೆ ಹಚ್ಚಲು ನಗರದಾದ್ಯಂತ ಶೋಧ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ಸೂಚಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

"ಎಲ್ಲ 653 ಗುಂಡುಗಳು ಪತ್ತೆಯಾಗುವವರೆಗೂ ನಗರದ ಮೇಲೆ ಲಾಕ್‌ಡೌನ್ ಮುಂದುವರಿಯಲಿದೆ" ಎಂದು ಹೈಸನ್ ನಗರವಿರುವ ರ್ಯಾಂಗಾಂಗ್ ನಿವಾಸಿಯೊಬ್ಬರು ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಮಾರ್ಚ್ 7ರಂದು ದಾಳಿ ಮಾಡುವ ರೈಫಲ್ ಹಾಗೂ ಮದ್ದುಗುಂಡುಗಳು ಕಾಣೆಯಾಗಿದ್ದವು ಎಂದೂ ವರದಿಯಾಗಿದೆ.

"ಫೆಬ್ರವರಿ 25ರಿಂದ ಮಾರ್ಚ್ 10ರ ನಡುವೆ ಸೇನಾಪಡೆಯನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿತ್ತು. ಆದರೆ, ಸೇನಾ ಪಡೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಗುಂಡುಗಳು ಕಾಣೆಯಾಗಿರುವುದರಿಂದ ತೀವ್ರ ತನಿಖೆಯು ಪ್ರಗತಿಯಲ್ಲಿದೆ. ಸೇನಾ ಪಡೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಗುಂಡುಗಳು ಕಾಣೆಯಾಗಿರುವ ವಿಷಯ ಯೋಧನೊಬ್ಬನ ಗಮನಕ್ಕೆ ಬಂದಿದೆ. ಆ ಸಂಗತಿಯನ್ನು ವರದಿ ಮಾಡುವ ಬದಲು ಯೋಧರು ತಾವೇ ಖುದ್ದಾಗಿ ಹುಡುಕಲು ಪ್ರಯತ್ನಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಆದರೆ, ಯೋಧರಿಗೆ ತಾವೇ ಗುಂಡುಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂಬ ಸಂಗತಿ ಮನವರಿಕೆಯಾದ ನಂತರ ಪ್ರಾಧಿಕಾರಗಳಿಗೆ ವರದಿ ಮಾಡಿದ್ದಾರೆ. ಇದರಿಂದ ಇಡೀ ನಗರದ ಮೇಲೆ ಲಾಕ್‌ಡೌನ್ ಹೇರಲಾಗಿದೆ.

ಇದನ್ನೂ ಓದಿ: ಮಸೀದಿಗೆ ನುಗ್ಗಿ 'ಜೈ ಶ್ರೀ ರಾಮ್‌' ಹೇಳಲು ನಿರಾಕರಿಸಿದ ಇಮಾಮ್‌ಗೆ ಹಲ್ಲೆಗೈದು, ಗಡ್ಡ ಕತ್ತರಿಸಿದ ದುಷ್ಕರ್ಮಿಗಳು

Similar News