ಕಾರ್ಕಳ: ವಿಷ್ಣು ಮೂರ್ತಿ ದೇವಾಲಯಕ್ಕೆ ಖ್ಯಾತ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ

Update: 2023-03-28 12:57 GMT

ಕಾರ್ಕಳ: ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ಖ್ಯಾತ ಕ್ರಿಕೆಟಿಗ, ಭಾರತ ತಂಡದ ಮಾಜಿ ಕಪ್ತಾನ ರವಿಶಾಸ್ತ್ರಿ ಮಂಗಳವಾರ ಭೇಟಿ ನೀಡಿದರು.

ನರಸಿಂಹ ತಂತ್ರಿ ಹಾಗೂ ಅಶೋಕ್ ಕಾರಂತ್ ಪೂಜಾ ವಿಧಿ ವಿಧಾನ ನೆರವೇರಿಸಿದರು‌.

ಮುಂದಿನ ತಿಂಗಳಲ್ಲಿ ನಡೆಯುವ ಐಪಿಎಲ್ ಪಂದ್ಯಾಟದ ಬಗ್ಗೆ ಉಲ್ಲೇಖಿಸಿದ ರವಿ ಶಾಸ್ತ್ರಿ  ಹತ್ತು ಟೀಂಗಳಿದ್ದು  ಕ್ರೀಡಾ ಕ್ಷೇತ್ರವೆ ಕಾತರದಲ್ಲಿದೆ. ಈಗಾಗಲೇ ಅದರ ಪೂರ್ವ ತಯಾರಿಗಳು ನಡೆಯುತಿದೆ. ಐಪಿಎಲ್ ನಲ್ಲಿ ಯುವ ಆಟಗಾರರಿಗೆ ತೆರೆದಿಟ್ಟ ವೇದಿಕೆಯಾಗಿದ್ದು ದಾಖಲೆಗಳಿಗೆ ಸ್ಪೂರ್ತಿದಾಯಕವಾಗಿದೆ. ಮುಂದೆ ನಡೆಯಲಿರುವ ವರ್ಲ್ಡ್‌ ಕಪ್ ನಲ್ಲಿ ಉತ್ತಮ ಕ್ರೀಡಾಪಟುಗಳಿಗೆ ಭಾಗವಹಿಸಲು ಐಪಿಎಲ್ ಬಹುದೊಡ್ಡ ವೇದಿಕೆ ಕಲ್ಪಿಸುತ್ತಿದೆ ಎಂದರು.

ಭಾರತೀಯ ಕ್ರಿಕೆಟ್ ತಂಡದ ಉಲ್ಲೇಖಿಸಿದ ರವಿಶಾಸ್ತ್ರಿ  ಕ್ರೀಡೆಯಲ್ಲಿ ಏರಿಳಿತಗಳು ಸರ್ವೆ ಸಾಮಾನ್ಯ ವಾಗಿದೆ. ಆದರೆ ಅದರಲ್ಲೂ ಉತ್ತಮ ಪ್ರತಿಭೆ ತೋರುತ್ತಿರುವುದು ಶ್ಲಾಘನೀಯ ಎಂದರು. ಕೆ‌.ಎಲ್ ರಾಹುಲ್ ಉತ್ತಮ ಶ್ರೇಯಾಂಕದಲ್ಲಿ ಆಡುತ್ತಿದ್ದಾನೆ. ಮುಂದಿನ ಎಂಟು ವರ್ಷಗಳಲ್ಲಿ ಆತನಿಗೆ ಉತ್ತಮ ಭವಿಷ್ಯವಿದೆ  ಎಂದರು.

ಈ ಸಂದರ್ಭ ಪತ್ರಕರ್ತ ಮನೋಹರ್ ಪ್ರಸಾದ್, ದೇವಾಲಯ ಮೊಕ್ತೇಸರ ಅನಂತ ಪಟ್ಟಾಭಿರಾವ್, ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಭೋಜ ಶೆಟ್ಟಿ, ಬ್ರಹ್ಮಕಲಶೋತ್ಸವದ ಕಾರ್ಯದರ್ಶಿ ರಮೇಶ್ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಹೆಗ್ಡೆ,  ಕರ್ನಾಟಕ ಬ್ಯಾಂಕ್ ನ ನಿವೃತ್ತ ಜನರಲ್ ಮ್ಯಾನೇಜರ್ ನಾಗರಜ್ ರಾವ್, ಸತೀಶ್ ರಾವ್, ಗೌರವಾಧ್ಯಕ್ಷ ಯುವರಾಜ್ ನಾಯಕ್, ಚಲನಚಿತ್ರ ನಿರ್ದೇಶಕ ಸಂದೀಪ್ ಶೆಟ್ಟಿ,  ಸುಧೀರ್ ಕುಮಾರ್ ಪಡುಬಿದ್ರೆ , ನವೀನ್ ಕುಮಾರ್ ಶೆಟ್ಟಿ, ರಮಾಕಾಂತ್ , ಪವನ್ ಜೈನ್ , ಕಸ್ತೂರಿ ಉಪಸ್ಥಿತರಿದ್ದರು.

Similar News