ವಿಶ್ವ ಗ್ಲೋಕೊಮ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥ

Update: 2023-03-28 14:29 GMT

ಉಡುಪಿ: ಗ್ಲೋಕೊಮ ಸದ್ದಿಲ್ಲದೆ ಬರುವ ಕಣ್ಣಿನ ಕಾಯಿಲೆ ಯಾಗಿದೆ. ಈ ಕಾಯಿಲೆಯಿಂದ ಕಳೆದುಕೊಂಡ ದೃಷ್ಟಿ ಯನ್ನು ಮತ್ತೆ ವಾಪಾಸ್ಸು ಕೊಡಲು ಸಾಧ್ಯವಿಲ್ಲ. ಆದುದರಿಂದ ಕಣ್ಣಿನ ಪರೀಕ್ಷೆಯ ಜೊತೆ ಗ್ಲೋಕೊಮ ಪರೀಕ್ಷೆ ಯನ್ನು ಪ್ರತಿಯೊಬ್ಬರು ಮಾಡಬೇಕು. ಇದರಿಂದ ಅಂಧ್ವತ್ವವನ್ನು ತಡೆಯ ಬಹುದಾಗಿದೆ ಎಂದು ನೇತ್ರತಜ್ಞ ಡಾ.ಕೃಷ್ಣ ಪ್ರಸಾದ್ ಕೂಡ್ಲು ತಿಳಿಸಿದ್ದಾರೆ.

ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಾ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಪ್ಯಾರಾ ಮೆಡಿಕಲ್ ಸೈನ್ಸ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗ್ಲೋಕೊಮ ದಿನಾಚರಣೆ ಪ್ರಯಕ್ತ ಮಂಗಳವಾರ ಹಮ್ಮಿಕೊಳ್ಳಲಾದ ಗ್ಲೋಕೋಮ ಜಾಗೃತಿ ಜಾಥಕ್ಕೆ ಪ್ರಸಾದ್ ನೇತ್ರಾಲಯದ ಎದುರು ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ಪ್ರಸಾದ್ ನೇತ್ರಾಲಯದ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ನೇತ್ರ ತಜ್ಞರಾದ ಡಾ.ಪರೇಶ್ ಪೂಜಾರಿ, ಡಾ.ಸೀಮಾ, ಎಂ.ಇ.ಆಚಾರ್ಯ, ಅಬ್ದುಲ್ ಖಾದರ್, ನೇತ್ರಾಜ್ಯೋತಿಯ ಪ್ರಾಂಶುಪಾಲ ರಾಜೀವ ಮಂಡಲ್, ಮುಖ್ಯ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ ಪರ್ಕಳ ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದಿಂದ ಹೊರಟ ಜಾಥವು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸಮಾಪ್ತಿಗೊಂಡಿತು.

Similar News