ತಂತ್ರಜ್ಞಾನ, ವೈದ್ಯಕೀಯ ರಂಗದಲ್ಲಿ ಪರಿಣಾಕಾರಿ ಬದಲಾವಣೆಯಾಗುತ್ತಿದೆ : ಡಾ.ಎಂ.ಶಾಂತಾರಾಮ ಶೆಟ್ಟಿ

ಕೆಎಸ್ ಹೆಗ್ಡೆ ಆಸ್ಪತ್ರೆಯ ಕಿವಿ, ಮೂಗು, ಗಂಟಲು ವಿಭಾಗದಲ್ಲಿ ಕ್ಲಿನಿಕ್ ಉದ್ಘಾಟನೆ

Update: 2023-03-28 16:39 GMT

ಕೊಣಾಜೆ:  ಇಂದಿನ ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ, ವೈದ್ಯಕೀಯ ವ್ಯವಸ್ಥೆಯಲ್ಲೂ ಅನೇಕ ಪರಿಣಾಮಕಾರಿ ಬದಲಾವಣೆಗಳಾಗುತ್ತಿವೆ. ಅನೇಕ ರೀತಿಯ ರೋಗಗಳನ್ನು ಪತ್ತೆ ಹಚ್ಚಿ ಗುಣಪಡಿಸುವಲ್ಲಿ ಆಧುನಿಕ ಸಾಧನಗಳು, ತಂತ್ರಜ್ಞಾನದ ಪ್ರಭಾವ ಬಹಳಷ್ಟಿವೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾದ ಡಾ. ಎಂ ಶಾಂತರಾಮ ಶೆಟ್ಟಿ ಅವರು ಹೇಳಿದರು.

ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಕಿವಿ, ಮೂಗು, ಗಂಟಲು ವಿಭಾಗದಲ್ಲಿ ತಲೆಸುತ್ತುವಿಕೆಯ ಕಾಯಿಲೆಯ ಕ್ಲಿನಿಕ್ ಉದ್ಘಾಟನೆ ಹಾಗೂ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೆಹಲಿಯ ಹಿರಿಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ. ಅಚಲ್ ಗುಲಾಟಿ ಅವರು ನೂತನ ಕ್ಲೀನಿಕ್ ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಕುಲಪತಿಗಳಾದ ಡಾ. ಸತೀಶ್ ಕುಮಾರ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬೆಂಗಳೂರಿನ ಡಾ. ಶ್ರೀನಿವಾಸ ದೊರಸಾಲ ಅವರು ತಲೆಸುತ್ತುವಿಕೆಯ ಕಾರಣವನ್ನು ಖಚಿತವಾಗಿ ಕಂಡುಹಿಡಿಯುವಲ್ಲಿ ನೆರವಾಗುವಂತಹ ಸಾಧನಗಳ ಬಗ್ಗೆ ವಿವರಿಸಿದರು ಹಾಗೂ  ಆಧುನಿಕವಾಗಿ ದೇಶಿಯವಾಗಿ ನಿರ್ಮಿಸಲಾದ ವಿ.ಎನ್.ಜಿ ಸಾಧನದ ಕಾರ್ಯವಿಧಾನ ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಅಧೀಕ್ಷಕರಾದ ಡಾ. ಸುಮಲತಾ ಆರ್ ಶೆಟ್ಟಿ ಉಪಸ್ಥಿತರಿದ್ದರು.

ಕಿವಿ, ಮೂಗು, ಗಂಟಲು ವಿಭಾಗದ ಮುಖ್ಯಸ್ಥರಾದ ಡಾ.ವಾದೀಶ ಭಟ್ ಸ್ವಾಗತಿಸಿದರು. ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮರೀನಾ ಸಲ್ದಾನ ವಂದಿಸಿದರು. ಡಾ. ಸಲೋನಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರಿನ ವಿವಿಧ ಕಾಲೇಜಿನ ಸುಮಾರು 80ಕ್ಕೂ ಹೆಚ್ಚು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪಯೋಗವನ್ನು ಪಡೆದುಕೊಂಡರು.

Similar News