ಔಷಧ ನಿಯಂತ್ರಣ ಪ್ರಾಧಿಕಾರಗಳಿಂದ ಕಾರ್ಯಾಚರಣೆ: 18 ಔಷಧ ಕಂಪೆನಿಗಳ ಪರವಾನಿಗೆ ರದ್ದು

Update: 2023-03-28 17:33 GMT

ಹೊಸದಿಲ್ಲಿ, ಮಾ. 28: ನಕಲಿ ಹಾಗೂ ಕಲಬೆರಕೆ ಔಷಧ ತಯಾರಿಕೆ ಕಂಪೆನಿಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಔಷಧ ನಿಯಂತ್ರಣ ಪ್ರಾಧಿಕಾರ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿತು.

ಈ ಕಾರ್ಯಾಚರಣೆ ಭಾಗವಾಗಿ ಪ್ರಾಧಿಕಾರ 18 ಔಷಧ ಕಂಪೆನಿಗಳ ಪರವಾನಿಗೆಯನ್ನು ರದ್ದುಗೊಳಿಸಿದೆ ಅಥವಾ ಅಮಾನತಿನಲ್ಲಿರಿಸಿದೆ.   26 ಔಷಧ ಕಂಪೆನಿಗಳಿಗೆ ಶೋಕಾಸ್ ನೋಟಿಸು ಜಾರಿ ಮಾಡಿದೆ.

ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ರಾಜ್ಯ ಪ್ರಾಧಿಕಾರದೊಂದಿಗೆ 20 ರಾಜ್ಯಗಳಲ್ಲಿರುವ ಔಷಧ ಕಂಪೆನಿಗಳಲ್ಲಿ ತಪಾಸಣೆ ನಡೆಸಿದೆ.

ಈ ಕಾರ್ಯಾಚರಣೆ ಭಾಗವಾಗಿ ತಪಾಸಣೆ ನಡೆಸಲು 203 ಔಷಧ ಕಂಪೆನಿಗಳನ್ನು ಪ್ರಾಧಿಕಾರ ಗುರುತಿಸಿತ್ತು. ಇಂತಹ ಕಂಪೆನಿಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಅತ್ಯಧಿಕ (70) ಅನಂತರ ಅತ್ಯಧಿಕ ಉತ್ತರಾಖಂಡ (45) ಹಾಗೂ ಮಧ್ಯಪ್ರದೇಶ (23)ದಲ್ಲಿ ಗುರುತಿಸಲಾಗಿತ್ತು.

ಭಾರತೀಯ ಕಂಪೆನಿಗಳು ಉತ್ಪಾದಿಸುವ ಔಷಧಗಳ ಗುಣಮಟ್ಟದ ಕುರಿತು ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

Similar News