ಮಂಗಳೂರು: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರ ಯೂಸುಫ್

ಕಡಲ್ಕೊರೆತ ತಡೆಗೆ ಕೈಗೊಂಡ ಕಾಮಗಾರಿಯಲ್ಲಿ ಭ್ರಷ್ಟಾಚಾರ ಆರೋಪ

Update: 2023-03-29 05:05 GMT

ಮಂಗಳೂರು: ಕಡಲ್ಕೊರೆತ ತಡೆಗೆ ಸಂಬಂಧಿಸಿ ಕೈಗೊಂಡಿರುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಕಂಟ್ರಾಕ್ಟರ್‌ ಮತ್ತು ಸೀವೇವ್ ಬ್ರೇಕರ್ ಯೋಜನೆಯ ರೂವಾರಿ ಯುಕೆ ಯೂಸುಫ್ ಅವರು ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿ, ತನಿಖೆಗೆ ಒತ್ತಾಯಿಸಿದ್ದಾರೆ.

ಒಳನಾಡು ನೀರು ಸಾರಿಗೆ ಇಲಾಖೆ ಮುಖ್ಯ ಇಂಜಿನಿಯರ್ ತಾರಾನಾಥ್ ರಾಥೋಡ್, ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ನಿರ್ದೇಶಕ ಮಹೇಶ್ ಹಾಗೂ  ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ  ನಿರ್ದೇಶಕ ಕ್ಯಾಪ್ಟನ್ ಸಿ ಸ್ವಾಮಿ  ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.

ಸೀವೇವ್ ಬ್ರೇಕರ್ ಪ್ರಾಯೋಗಿಕ ಯೋಜನೆಯ ವೆಚ್ಚ 6.5 ಕೋಟಿ. ರೂ. ಎಂದು ಅಂದಾಜಿಸಲಾಗಿದ್ದರೂ, ಅಧಿಕಾರಿಗಳು 12 ಕೋಟಿ ರೂ. ಮೊತ್ತದ ಪ್ರಸ್ತಾವನೆಯ ಸಲ್ಲಿಸಿರುವುದನ್ನು ಪ್ರಶ್ನಿಸಿರುವ ಯೂಸುಫ್ ಅವರು ಈ ಬಗ್ಗೆ ಸೂಕ್ತ ತನಿಖೆಗೆ ಲೋಕಾಯುಕ್ತರನ್ನು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

Similar News