×
Ad

ಆತೂರು : 'ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್' ನಿಂದ ರಮಝಾನ್ ಕಿಟ್ ವಿತರಣೆ

Update: 2023-03-30 17:17 IST

ಆತೂರು: ಅಲ್ ಸಫರ್ ಹೆಲ್ಪ್ ಲೈನ್ ಆತೂರು ಬೈಲ್ ಇದರ ವತಿಯಿಂದ ರಮಝಾನ್ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಆತೂರು ಬೈಲ್ ನಲ್ಲಿ ಜರುಗಿತು.

ಖಮರುಲ್ ಇಸ್ಲಾಂ ಮದ್ರಸದ ಖತೀಬರಾದ  ಅಶ್ಪಾಕ್ ಮನ್ನಾನಿ ಉಸ್ತಾದ್ ರವರು ದುಹಾ ನೆರೆವೇರಿಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 51 ಕುಟುಂಬಕ್ಕೆ ಆಹಾರ ಕಿಟ್ ವಿಕರಿಸಲಾಯಿತು.

ಅಲ್ ಸಫರ್ ಹೆಲ್ಪ್ ಲೈನ್ ಗೌರವದ್ಯಕ್ಷರಾದ ಎಂ ಎ ಹಂಝರವರು ಅದ್ಯಕ್ಷತೆ ವಹಿಸಿದ್ದರು..ಈ ಸಂದರ್ಭದಲ್ಲಿ ಮದ್ರಸದ ಸಹ ಅದ್ಯಾಪಕರಾದ ಬದ್ರುದ್ದೀನ್ ಉಸ್ತಾದ್ ,ಖಮರುಲ್ ಇಸ್ಲಾಂ ಮದ್ರಸದ ಅದ್ಯಕ್ಷರಾದ ಎ ಕೆ ಬಶೀರ್ ,ಕಾರ್ಯದರ್ಶಿ ಅಬ್ದುಲ್ ಖಾದರ್,ಖಮರುಲ್ ಇಸ್ಲಾಂ ಮದ್ರಸದ ಮಾಜಿ ಅದ್ಯಕ್ಷರಾದ ಡಿ ಎ ಪುತ್ತುಮೋನು ,ಮಾಜಿ ಕಾರ್ಯದರ್ಶಿ ಅಬೂಬಕ್ಕರ್,ಅಲ್ ಸಫರ್ ಹೆಲ್ಪ್ ಲೈನ್ ಖಜಾಂಜಿ ಹಕೀಂ ಡಿ, ಸದಸ್ಯರಾದ ಶರೀಫ್ ಅಕ್ಕರೆ ,ಇಮ್ತಿಯಾಝ್,ಮುರ್ಷಿದ್, ಝಾಯಿದ್ ಇದ್ದರು.

ಅಲ್ ಸಫರ್ ಹೆಲ್ಪ್ ಲೈನ್ ಅದ್ಯಕ್ಷರಾದ ಬಾತಿಶಾ ಆತೂರು ಸ್ವಾಗತಿಸಿದರು

Similar News