ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ

Update: 2023-03-30 17:46 GMT

ಮಂಗಳೂರು: ಅಖಿಲ ಭಾರತೀಯ  ತಾಂತ್ರಿಕ ಪದವೀಧರ ಯೋಗ್ಯತೆ ಪರೀಕ್ಷೆ (GATE)-2023 ಬಯೋಟಕ್ನಾಲಜಿ ವಿಭಾಗದ ಪರೀಕ್ಷೆಯಲ್ಲಿ ಪ್ರಥಮ  ರ‍್ಯಾಂಕ್ ಪಡೆದ ಐಶ್ವರ್ಯ ಅವರಿಗೆ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ  ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಐಶ್ವರ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಲೇಜಿನಿಂದ ಸಿಕ್ಕ ಪ್ರೇರಣೆ ನನ್ನ ಸಾಧನೆಗೆ ಮುಖ್ಯ ಕಾರಣ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ವಿ.ಕರುಣಾಕರನ್, ಅಧ್ಯಕ್ಷರು, ಕರುಣಾ ಇನ್ಫ್ರಾ ಪ್ರೊಪ್ರಟೀಸ್, ಮಂಗಳೂರು ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಶಿಹಾಬ್ ಕಲಂದರ್,  ಸಹಸಂಸ್ಥಾಪಕರು ನೆವಿಗೋ ಸೋಲ್ಯಶನ್ ಪ್ರೈವೇಟ್ ಲಿಮಿಟೆಡ್, ಮಂಗಳೂರು ಇವರು ಮಾತನಾಡಿ ವಿದ್ಯಾರ್ಥಿಗಳು ಹೇಗೆ ಉದ್ಯೋಗವಕಾಶನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪಿ.ಎ.ವಿದ್ಯಾಸಂಸ್ಥೆಯ ಟ್ರಸ್ಟಿ ಝುಬೈರ್ ಇಬ್ರಾಹಿಂ ಮಾತನಾಡಿ, ಪಿ.ಎ.ವಿದ್ಯಾಸಂಸ್ಥೆಯನ್ನು ಸ್ತ್ರೀ ಸಬಲೀಕರಣದ ಉದ್ದೇಶದಿಂದ ಪಿ.ಎ.ಇಬ್ರಾಹಿಂ ಹಾಜೀ ಅವರು ಪ್ರಾರಂಭಿಸಿದ್ದರು. ಅವರ ಕನಸನ್ನು ಐಶ್ವರ್ಯ ಪೂರೈಸಿದರು ಎಂದು ಸಂತೋಷ ವ್ಯಕ್ತಪಡಿಸಿದರು.

ಇತರ ಟ್ರಸ್ಟಿಗಳಾದ ಅಬ್ದುಲ್ಲಾ ಲತೀಫ್, ಮೊಹಮ್ಮದ್ ಅಮೀನ್ ಇಬ್ರಾಹಿಂ‌, ಬಿಲಾಲ್ ಇಬ್ರಾಹಿಂ,  ಆದಿಲ್ ಇಬ್ರಾಹಿಂ ಹಾಗೂ ಪಿ.ಎ.ವಿದ್ಯಾಸಂಸ್ಥೆಯ ಎ.ಜಿ.ಯಂ. ಶಫ್ರುದ್ದೀನ್ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ರಮಿಸ್ ಎಂ ಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಎ.ಡಿ.ಸಿ., ಸ್ಪರ್ಧೆಯ ವಿಜೇತರನ್ನೂ ಕೂಡ ಅಭಿನಂದಿಸಲಾಯಿತು ಮತ್ತು  ಕಾಲೇಜಿನ ಮಾಧ್ಯಮದ ಕ್ಲಬ್ ನ ಉದ್ಘಾಟನೆ ನಡೆಯಿತು.

ಪಿ.ಎ. ಟ್ರಸ್ಟಿನ ವಿವಿಧ  ವಿದ್ಯಾಸಂಸ್ಥೆಯ ಪ್ರಾಂಶುಪಾಲರರು, ಪಿ.ಎ. ಟ್ರಸ್ಟಿನ ಡೀನ್ (ವಿದ್ಯಾರ್ಥಿ ವ್ಯವಹಾರಗಳು)  ಡಾ.ಸಯ್ಯದ್ ಅಮೀನ್, ವಿವಿಧ ವಿಭಾಗದ ಮುಖ್ಯಸ್ಥರು,ಕಾಲೇಜಿನ ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು.

ಸ್ವಾಗತ ಭಾಷಣವನ್ನು ಬಯೋಟಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣಪ್ರಸಾದ್ ನೆರವೇರಿಸಿದರು. ಉಪಪ್ರಾಂಶುಪಾಲರಾದ  ಡಾ.ಶರ್ಮಿಳಾ ಕುಮಾರಿ ವಂದಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಇಸ್ಮಾಯಿಲ್ ಶಾಫಿ ಎ ಎಂ ಹಾಗೂ ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಪ್ರೊ. ಇಕ್ಬಾಲ್ ಕಾರ್ಯಕ್ರಮದ ಸಂಯೋಜಕರಾಗಿದ್ದರು.  ವಿದ್ಯಾರ್ಥಿ ಮೊಯಿದ್ದೀನ್ ನಾಝಿಮ್  ಕಾರ್ಯಕ್ರಮ ನಿರೂಪಿಸಿದರು.

Similar News