ಪತಿ ವೃತ್ತಿಪರ ಭಿಕ್ಷುಕನಾಗಿದ್ದರೂ ಪತ್ನಿಗೆ ಜೀವನಾಂಶ ನೀಡುವ ನೈತಿಕ,ಕಾನೂನಾತ್ಮಕ ಹೊಣೆಗಾರಿಕೆ ಹೊಂದಿದ್ದಾನೆ:ಹೈಕೋರ್ಟ್

Update: 2023-04-01 10:12 GMT

ಹೊಸದಿಲ್ಲಿ: "ತನ್ನ ಜೀವನ ನಿರ್ವಹಣೆ ನಡೆಸಲು ಸಾಧ್ಯವಾಗದ ಪತ್ನಿಗೆ ಜೀವನಾಂಶ ನೀಡುವ ನೈತಿಕ ಮತ್ತು ಕಾನೂನಾತ್ಮಕ ಹೊಣೆಗಾರಿಕೆ, ಪತಿಯೊಬ್ಬನಿಗೆ ಆತ ವೃತ್ತಿಪರ ಭಿಕ್ಷುಕನಾಗಿದ್ದರೂ ಸಹ ಇದೆ," ಎಂದು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಇತ್ತೀಚೆಗೆ ಪ್ರಕರಣವೊಂದರ ತೀರ್ಪು ನೀಡುವ ವೇಳೆ ಹೇಳಿದೆ.

ಪತ್ನಿಗೆ ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶಿಸಿ ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ ಪತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಜಸ್ಟಿಸ್‌ ಎಚ್‌ ಎಸ್ ಮದನ್‌ ಅವರು ವಜಾಗೊಳಿಸುವ ಸಂದರ್ಭ ಮೇಲಿನಂತೆ ಹೇಳಿದರು.

ಈ ಪ್ರಕರಣದಲ್ಲಿ ಪತಿ ದೈಹಿಕವಾಗಿ ಸಬಲನಾಗಿದ್ದು ಹಾಗೂ ಈಗಿನ ದಿನಗಳಲ್ಲಿ ಕೂಲಿ ಕಾರ್ಮಿಕನೊಬ್ಬ ಕೂಡ ದಿನಕ್ಕೆ ರೂ. 500 ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಾನೆ. ಈಗಿನ ಬೆಲೆಯೇರಿಕೆಯ ಕಾಲದಲ್ಲಿ ನೀಡಬೇಕೆಂದು ಸೂಚಿಸಲಾದ ಜೀವನಾಂಶ ಹೆಚ್ಚೆಂದು ಹೇಳಲಾಗದು," ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಪತ್ನಿಯು ಹಿಂದು ವಿವಾಹ ಕಾಯಿದೆ 1955 ಇದರ ಸೆಕ್ಷನ್‌ 24 ಅಡಿಯಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಳಲ್ಲದೆ ಗಂಡನಿಂದ ಮಾಸಿಕ ರೂ. 15000 ಜೀವನಾಂಶ ಹಾಗೂ ರೂ. 11,000 ವ್ಯಾಜ್ಯ ವೆಚ್ಚ ನೀಡಬೇಕೆಂದು ಕೋರಿದ್ದಳು.

ಪತ್ನಿಗೆ ರೂ. 5000 ಜೀವನಾಂಶ ನೀಡಬೇಕು ಹಾಗೂ ವ್ಯಾಜ್ಯ ವೆಚ್ಚವಾಗಿ ರೂ. 5500 ನೀಡಬೇಕೆಂದು ವಿಚಾರಣಾ ನ್ಯಾಯಾಲಯ ಹೇಳಿತ್ತು.

ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೊರೆ ಹೋಗಿದ್ದ.

ಇದನ್ನೂ ಓದಿ: ನ್ಯಾಯಾಲಯದಿಂದ ದಂಡಕ್ಕೆ ಗುರಿಯಾದರೂ ಪ್ರಧಾನಿಯ ಪದವಿ ಕುರಿತು ಮತ್ತೆ ಪ್ರಶ್ನಿಸಿದ ಅರವಿಂದ್ ಕೇಜ್ರಿವಾಲ್

Similar News