ಕಕ್ಕೆಪದವು: ತಾಜುಲ್ ಉಲಮಾ ರಿಲೀಫ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ದ.ಕ ವತಿಯಿಂದ ರಮಝಾನ್ ಕಿಟ್ ವಿತರಣೆ
Update: 2023-04-02 21:13 IST
ಬಂಟ್ವಾಳ : 'ತಾಜುಲ್ ಉಲಮಾ ರಿಲೀಫ್ & ಚಾರಿಟೇಬಲ್ ಟ್ರಸ್ಟ್ (ರಿ) ದಕ್ಷಿಣ ಕನ್ನಡ' ಇದರ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಕಕ್ಕೆಪದವು ಸಮೀಪದ ಕುಲಾಲ್ ಬದ್ರಿಯಾ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 75 ಜಮಾಅತ್ ಗಳಿಗೆ ಒಳಪಟ್ಟ 500 ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸುವ ೀ ಕಾರ್ಯಕ್ರಮಕ್ಕೆ ಮಸೂದ್ ಸಅದಿ ಗಂಡಿಬಾಗಿಲು ಚಾಲನೆ ನೀಡಿದರು.
ಸಯ್ಯದ್ ಹಂಝ ತಂಙಳ್ ಕರ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಹಮ್ಮದ್ ಶರೀಫ್ ಮದನಿ ಪಾಂಡವರಕಲ್ಲು ಹಾಗೂ ಹುಸೈನ್ ಸಖಾಫಿ ಕಕ್ಕಿಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ವಗ್ಗ, ಉಪಾಧ್ಯಕ್ಷ ಅಬ್ದುಲ್ ಹಮೀದ್ ಪುಂಜಾಲಕಟ್ಟೆ, ಕಾರ್ಯದರ್ಶಿ ರಾಝಿಕ್ ಬಿಎಂ, ಟ್ರಸ್ಟಿ ಮುಹಮ್ಮದ್ ಇಲ್ಯಾಸ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.