ಕ್ರಿಕೆಟ್ ಪಂದ್ಯದ ವೇಳೆ ನೋಬಾಲ್ ನೀಡಿದ್ದಕ್ಕೆ ಚೂರಿ ಇರಿದು ಅಂಪೈರ್ ಕೊಲೆ
Update: 2023-04-03 15:42 IST
ಕಟಕ್: ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ನೋಬಾಲ್ ನೀಡಿದ್ದಕ್ಕಾಗಿ ಘರ್ಷಣೆ ನಡೆದು, ಆತನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರವಿವಾರ ಒಡಿಶಾದ ಕಟಕ್‌ನಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.
ಮೃತ ವ್ಯಕ್ತಿಯನ್ನು ಲಕ್ಕಿ ರಾವತ್ (22) ಎಂದು ಗುರುತಿಸಲಾಗಿದ್ದು, ನೋಬಾಲ್ ಕುರಿತ ವಾಗ್ವಾದದ ಸಂದರ್ಭದಲ್ಲಿ ಆತನನ್ನು ಸ್ಮೃತಿ ರಂಜನ್ ರಾವತ್ ಎಂಬಾತ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕಿಕ್ಕಿರಿದು ತುಂಬಿದ್ದ ವೇದಿಕೆ ಕುಸಿದು ಬಿದ್ದು ಇಬ್ಬರು ಕಾಂಗ್ರೆಸ್ ಶಾಸಕರಿಗೆ ಗಾಯ