ಮಂಗಳೂರು: ಮೀನು ವ್ಯಾಪಾರಿಯ 1.50 ಲಕ್ಷ ರೂ. ಹಣ ಕಸಿದು ಪರಾರಿ
Update: 2023-04-03 22:16 IST
ಮಂಗಳೂರು: ನಗರದ ದಕ್ಕೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ಅಪರಿಚಿತನೊಬ್ಬ 1.50 ಲಕ್ಷ ರೂ. ಕಸಿದು ಪರಾರಿಯಾದ ಘಟನೆ ಶನಿವಾರ ನಡೆದಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಸುಮಾರು 6:45ಕ್ಕೆ ವ್ಯಾಪಾರಿಯು ಮೀನು ಖರೀದಿಗೆಂದು 1.50 ಲಕ್ಷ ರೂ. ಇದ್ದ ಪರ್ಸ್ ಅನ್ನು ಪ್ಲಾಸ್ಟಿಕ್ ಬ್ಯಾಗ್‌ನೊಳಗೆ ಹಾಕಿ ದಕ್ಕೆಗೆ ತೆರಳುತ್ತಿದ್ದಾಗ ವ್ಯಕ್ತಿಯು ಪ್ಲಾಸ್ಟಿಕ್ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.