ಐಪಿಎಲ್: ಲಕ್ನೊ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ರೋಚಕ ಜಯ
ಋತುರಾಜ್ ಗಾಯಕ್ವಾಡ್ ಸತತ ಎರಡನೇ ಅರ್ಧಶತಕ
ಚೆನ್ನೈ, ಎ.3: ಕೈಲ್ ಮೇಯರ್ಸ್ (53 ರನ್, 22 ಎಸೆತ)ಅರ್ಧಶತಕದ ಕೊಡುಗೆಯ ಹೊರತಾಗಿಯೂ ಲಕ್ನೊ ಸೂಪರ್ ಜೈಂಟ್ಸ್ ತಂಡ ಸೋಮವಾರ ನಡೆದ ಐಪಿಎಲ್‌ನ 6ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 12 ರನ್ ನಿಂದ ಅಂತರದಿಂದ ಸೋಲುಂಡಿದೆ.
ಗೆಲ್ಲಲು 218 ರನ್ ಗುರಿ ಪಡೆದಿದ್ದ ಲಕ್ನೊ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಲಕ್ನೊ ಪರ ನಿಕೊಲಸ್ ಪೂರನ್(32 ರನ್), ಮಾರ್ಕಸ್ ಸ್ಟೋನಿಸ್(21 ರನ್) ,ನಾಯಕ ಕೆ.ಎಲ್.ರಾಹುಲ್(20 ರನ್, 18 ಎಸೆತ), ಆಯುಷ್ ಬದೋನಿ(23 ರನ್) ಹಾಗೂ ಕೆ.ಗೌತಮ್(ಔಟಾಗದೆ 17) ಎರಡಂಕೆಯ ಸ್ಕೋರ್ ಗಳಿಸಿದರು.
ಚೆನ್ನೈ ಪರವಾಗಿ ಸ್ಪಿನ್ನರ್ ಮೊಯಿನ್ ಅಲಿ(4-26)ಯಶಸ್ವಿ ಬೌಲರ್ ಎನಿಸಿಕೊಂಡರು.
ಚೆನ್ನೈ 217/7: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡ ಋತುರಾಜ್ ಗಾಯಕ್ವಾಡ್(57 ರನ್, 31 ಎಸೆತ, 3 ಬೌಂಡರಿ ,4 ಸಿಕ್ಸರ್) ಹಾಗೂ ಡೆವೊನ್ ಕಾನ್ವೇ(47 ರನ್, 29 ಎಸೆತ, 5 ಬೌಂಡರಿ ,2 ಸಿಕ್ಸರ್) ಮೊದಲ ವಿಕೆಟ್‌ಗೆ ನಡೆಸಿದ ಶತಕದ ಜೊತೆಯಾಟ ಹಾಗೂ ಇತರ ಬ್ಯಾಟರ್‌ಗಳ ಉಪಯುಕ್ತ ಕೊಡುಗೆಯ ನೆರವಿನಿಂದ 7 ವಿಕೆಟ್‌ಗಳ ನಷ್ಟಕ್ಕೆ 217 ರನ್ ಕಲೆ ಹಾಕಿದೆ.