ಕೇರಳದ 6 ಉತ್ಪನ್ನಗಳಿಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಗೌರವ: ಇಲ್ಲಿದೆ ಹೆಚ್ಚಿನ ಮಾಹಿತಿ

Update: 2023-04-05 17:50 GMT

ಚೆನ್ನೈ, ಎ. 5: 2022-23 ವಿತ್ತ ವರ್ಷದಲ್ಲಿ ದೇಶದಲ್ಲಿ ಅತ್ಯಧಿಕ ಸಂಖ್ಯೆಯ ಉತ್ಪನ್ನಗಳು ಜಿಐ (ಜಿಯೋಗ್ರಾಫಿಕಲ್  ಇಂಡಿಕೇಶನ್) ಟ್ಯಾಗ್ ಪಡೆದುಕೊಂಡ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಈ ದತ್ತಾಂಶವನ್ನು ಹಂಚಿಕೊಂಡಿರುವ ಜಿಐ ರಿಜಿಸ್ಟ್ರಿ ಬುಧವಾರ ಈ ವಿಷಯ ತಿಳಿಸಿದೆ.

ಅಟ್ಟಪ್ಪಾಡಿಯ ಆಟ್ಟುಕೊಂಬು ಅವರ (ಬೀನ್ಸ್), ಅಟ್ಟಪ್ಪಾಡಿ ತುವರ (ಕೆಂಪು ಬೇಳೆ), ಒನಾಟ್ಟುಕರ ಎಳ್ಳು (ಎಳ್ಳು), ಕಂದಲೂರು ವಟ್ಟವಡ ವೆಳುತ್ತುಳ್ಳಿ (ಬೆಳ್ಳುಳ್ಳಿ) ಹಾಗೂ ಕೊಡುಂಙಲ್ಲೂರು ಪೊಟ್ಟುವೆಳ್ಳರಿ (ಸೌತೆಕಾಯಿ)ಯನ್ನು ಜಿಐ ಟ್ಯಾಗ್‌ಗೆ ಪರಿಗಣಿಸಲಾಗಿದೆ ಎಂದು ರಿಜಿಸ್ಟ್ರಿ ಬಿಡುಗಡೆ ಮಾಡಿದ ದತ್ತಾಂಶ ತಿಳಿಸಿದೆ. 

ಕೇರಳದ ಈ ಆರು ಉತ್ಪನ್ನಗಳಲ್ಲದೆ ಬಿಹಾರದ  ಮಿಥಿಲಾ ಮಖನಾ (ಫಾಕ್ಸ್ ಕಾಯಿ) ಹಾಗೂ ಮಹಾರಾಷ್ಟ್ರದ ಬಿಳಿ ನೀರುಳ್ಳಿ ಕೂಡ  ಜಿಐ ಟ್ಯಾಗ್‌ಗೆ ಆಯ್ಕೆಯಾಗಿದೆ. 
ತೆಲಂಗಾಣದ ಅವರೆಯ ಸ್ಥಳೀಯ ಪ್ರಬೇಧ ತಂದೂರ್ ಕೆಂಪು ಅವರೆ, ಲಡಾಕ್‌ನ ಲಡಾಖ್ ರಕ್ಟ್‌ಸೆ ಕರ್ಪೊ ಆಪ್ರಿಕಾಟ್ ಹಾಗೂ ಅಸ್ಸಾಂ ಗಮೋಸಾ ಕರಕುಶಲ ಕೂಡ ಈ ಗೌರವಕ್ಕೆ ಪಾತ್ರವಾಗಿದೆ.

Similar News