×
Ad

ಐಪಿಎಲ್: ರಾಜಸ್ಥಾನ ವಿರುದ್ಧ ಪಂಜಾಬ್ ಕಿಂಗ್ಸ್‌ಗೆ ರೋಚಕ ಜಯ

ಶಿಖರ್ ಧವನ್, ಪ್ರಭ್‌ಸಿಮ್ರಾನ್ ಸಿಂಗ್ ಅರ್ಧಶತಕ , ಎಲ್ಲಿಸ್‌ಗೆ 4 ವಿಕೆಟ್

Update: 2023-04-05 23:48 IST

   ಗುವಾಹಟಿ, ಎ.5: ನಾಯಕ ಸಂಜು ಸ್ಯಾಮ್ಸನ್(42 ರನ್, 25 ಎಸೆತ), ಶಿಮ್ರಾನ್ ಹೆಟ್ಮೆಯರ್(36 ರನ್,18 ಎಸೆತ) ಹಾಗೂ ಧ್ರುವ್ ಜುರೆಲ್(ಔಟಾಗದೆ 32 ರನ್,15 ಎಸೆತ) ಹೋರಾಟದ ಹೊರತಾಗಿಯೂ ವೇಗದ ಬೌಲರ್ ನಥಾನ್ ಎಲ್ಲಿಸ್(4-30) ದಾಳಿಗೆ ಸಿಲುಕಿದ ರಾಜಸ್ಥಾನ ರಾಯಲ್ಸ್ ತಂಡ ಬುಧವಾರ ನಡೆದ ಐಪಿಎಲ್‌ನ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 5 ರನ್ ಅಂತರದಿಂದ ವೀರೋಚಿತ ಸೋಲುಂಡಿದೆ.

 ಗೆಲ್ಲಲು 198 ರನ್ ಗುರಿ ಪಡೆದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 192 ರನ್ ಗಳಿಸಿದೆ.

ರಾಜಸ್ಥಾನ ಪರ ಸ್ಯಾಮ್ಸನ್(42 ರನ್, 25 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ದೇವದತ್ತ ಪಡಿಕ್ಕಲ್(21 ರನ್), ರಿಯಾನ್ ಪರಾಗ್(20 ರನ್), ಜೋಸ್ ಬಟ್ಲರ್(19 ರನ್)ಎರಡಂಕೆಯ ಸ್ಕೋರ್ ಗಳಿಸಿದರು.2 ವಿಕೆಟ್ ಪಡೆದ ಅರ್ಷದೀಪ ಸಿಂಗ್(2-47) ಎಲ್ಲಿಸ್‌ಗೆ ಸಾಥ್ ನೀಡಿದರು.
 
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ತಂಡ ನಾಯಕ ಶಿಖರ್ ಧವನ್(ಔಟಾಗದೆ 86 ರನ್, 56 ಎಸೆತ) ಹಾಗೂ ಪ್ರಭ್‌ಸಿಮ್ರನ್ ಸಿಂಗ್(60 ರನ್, 34 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. 

Similar News