ಐಪಿಎಲ್: ಆರ್‌ಸಿಬಿ ವಿರುದ್ಧ ಕೆಕೆಆರ್‌ಗೆ ಭರ್ಜರಿ ಜಯ
ಶಾರ್ದೂಲ್ ಠಾಕೂರ್, ಗುರ್ಬಾಝ್ ಅರ್ಧಶತಕ, ಮಿಂಚಿದ ವರುಣ್ ಚಕ್ರವರ್ತಿ
ಕೋಲ್ಕತಾ, ಎ.6: ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗುರುವಾರ ಐಪಿಎಲ್‌ನ 9ನೇ ಪಂದ್ಯದಲ್ಲಿ 81 ರನ್‌ಗಳ ಅಂತರದಿಂದ ಮಣಿಸಿದೆ.
ಗೆಲ್ಲಲು 205 ರನ್ ಗುರಿ ಪಡೆದಿದ್ದ ಆರ್‌ಸಿಬಿ ತಂಡ ವರುಣ್ ಚಕ್ರವರ್ತಿ(4-15), ಸುಯಶ್ ಶರ್ಮಾ(3-30) ಹಾಗೂ ಸುನೀಲ್ ನರೇನ್(2-16) ಬೌಲಿಂಗ್ ದಾಳಿಗೆ ತತ್ತರಿಸಿ 17.4 ಓವರ್‌ಗಳಲ್ಲಿ 123 ರನ್‌ಗೆ ಆಲೌಟಾಯಿತು.
ಆರ್‌ಸಿಬಿ ಪರ ಎಫ್‌ಡು ಪ್ಲೆಸಿಸ್(23 ರನ್), ವಿರಾಟ್ ಕೊಹ್ಲಿ(21 ರನ್),ಡೇವಿಡ್ ವಿಲ್ಲಿ(ಔಟಾಗದೆ 20) ಬ್ರೆಸ್‌ವೆಲ್(19 ರನ್)ಹಾಗೂ ಆಕಾಶ್ ದೀಪ್(17 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕೋಲ್ಕತಾ ತಂಡ ಶಾರ್ದೂಲ್ ಠಾಕೂರ್(68 ರನ್, 29 ಎಸೆತ, 9 ಬೌಂಡರಿ, 3 ಸಿಕ್ಸರ್) ಆಕ್ರಮಣಕಾರಿ ಆಟ ಹಾಗೂ ರಹಮಾನುಲ್ಲಾ ಗುರ್ಬಾಝ್(57 ರನ್, 44 ಎಸೆತ 6 ಬೌಂಡರಿ, 3 ಸಿಕ್ಸರ್)ಚೊಚ್ಚಲ ಐಪಿಎಲ್ ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿತು.