'ಟೈಗರ್‌ vs ಪಠಾಣ್‌': ಶಾರೂಖ್‌, ಸಲ್ಮಾನ್‌ರನ್ನು ಮತ್ತೆ ಒಂದೇ ತೆರೆ ಮೇಲೆ ತರಲು ಚಿಂತನೆ

Update: 2023-04-07 07:06 GMT

ಮುಂಬೈ: ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಅಭಿನಯದ ಅದ್ದೂರಿ ಚಲನಚಿತ್ರ ʻಟೈಗರ್‌  vs ಪಠಾಣ್‌ʼ ಅನ್ನು ನಿರ್ದೇಶಿಸಲು ಖ್ಯಾತ ಚಿತ್ರ ತಯಾರಕ ಸಿದ್ಧಾರ್ಥ್‌ ಆನಂದ್‌ ಅವರಿಗೆ ಆಮಂತ್ರಣ ನೀಡಲಾಗಿದೆ ಎಂಬ ಮಾಹಿತಿಯಿದೆ. ಭಾರತದಲ್ಲಿ ನಿರ್ಮಾಣವಾಗಲಿರುವ ಅತಿ ದೊಡ್ಡ ಬಜೆಟಿನ ಅದ್ದೂರಿ ಚಲನಚಿತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ.

ಶಾರುಖ್‌ ಮತ್ತು ಸಲ್ಮಾನ್‌ ಇತ್ತೀಚೆಗೆ ಆನಂದ್‌ ಅವರ ಲೇಟೆಸ್ಟ್‌ ಚಲನಚಿತ್ರ ʼಪಠಾಣ್‌ʼನಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಬಾರಿ ಈ ಇಬ್ಬರು ನಟರು 1995 ರಲ್ಲಿ ತೆರೆಕಂಡ ಕರಣ್‌ ಅರ್ಜುನ್‌ನಲ್ಲಿ ಜೊತೆಯಾಗಿ ನಟಿಸಿದ್ದರೆ ನಂತರ ಪರಸ್ಪರರ ಚಿತ್ರದಲ್ಲಿ ವಿಶೇಷ ಕಿರು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಗಳಲ್ಲಿ ಝೀರೋ, ಕುಚ್‌ ಕುಚ್‌ ಹೋತಾ ಹೈ, ಹಮ್‌ ತುಮ್ಹಾರೆ ಹೈ ಸನಮ್‌ ಸೇರಿವೆ.

'ಪಠಾಣ್‌' ಚಿತ್ರದಲ್ಲಿ ಸಲ್ಮಾನ್‌ ಅವರು ಟೈಗರ್‌ ಸ್ಪೈ ಏಜಂಟ್‌ ಆಗಿ ಕಾಣಿಸಿಕೊಂಡಿದ್ದರು.

Similar News