×
Ad

ಮುಂಬೈ: ಅಕ್ರಮ ಫಿಲ್ಮ್ ಸ್ಟುಡಿಯೋಗಳನ್ನು ಕೆಡವಲು ಮುಂದಾದ ಬಿಎಂಸಿ

Update: 2023-04-07 15:07 IST

ಮುಂಬೈ: ಮಹಾ ವಿಕಾಸ್ ಅಘಾಡಿ ಸರಕಾರದ ರಕ್ಷಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಬಿಜೆಪಿ ಆರೋಪಿಸಿರುವ ಹತ್ತಾರು ಫಿಲ್ಮ್ ಸ್ಟುಡಿಯೋಗಳನ್ನು ಕೆಡವಲು ಮುಂಬೈನ ಮಲಾಡ್ ಪ್ರದೇಶಕ್ಕೆ ಬುಲ್ಡೋಝರ್‌ಗಳು ಧಾವಿಸಿವೆ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಆದೇಶದ ನಂತರ ಮಹಾರಾಷ್ಟ್ರ ರಾಜಧಾನಿಯ ಮಹಾನಗರಪಾಲಿಕೆ ಸಂಸ್ಥೆಯಾದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್  (ಬಿಎಂಸಿ) ಈ ಕ್ರಮವನ್ನು ಆರಂಭಿಸಿತು.

ಈ ವಿಚಾರವನ್ನು ಬಹಳ ಸಮಯದಿಂದ ಪ್ರಸ್ತಾಪಿಸುತ್ತಿದ್ದ ಬಿಜೆಪಿಯ ನಾಯಕ ಕಿರೀಟ್ ಸೋಮಯ್ಯ ಅವರು ತಮ್ಮ ಬೆಂಬಲಿಗರೊಂದಿಗೆ ಗುದ್ದಲಿ ಹಿಡಿದು ಸ್ಥಳಕ್ಕೆ ತೆರಳುತ್ತಿದ್ದ ದೃಶ್ಯ ಕಂಡುಬಂತು. ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಎಂಸಿಜೆಡ್‌ಎಂಎ)ನಿಯಮ  ಉಲ್ಲಂಘಿಸಿ ವಂಚನೆಯ ದಾಖಲೆಗಳ ಆಧಾರದ ಮೇಲೆ ಅನುಮತಿಯಿಲ್ಲದೆ ಸ್ಟುಡಿಯೋಗಳನ್ನು ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದ್ದರು.

NGT ಯ ಪಶ್ಚಿಮ ವಲಯದ ಪೀಠವು ಗುರುವಾರ ಮಧ್  ದ್ವೀಪದಲ್ಲಿನ ಐದು ಸ್ಟುಡಿಯೋಗಳನ್ನು ನೆಲಸಮಗೊಳಿಸುವುದರ ಮೇಲಿನ ತಡೆಯಾಜ್ಞೆಯನ್ನು ಹಿಂತೆಗೆದುಕೊಂಡಿತು ಮತ್ತು ಸ್ಟುಡಿಯೋ ನಿರ್ವಾಹಕರು ಸಲ್ಲಿಸಿದ ಮನವಿಯನ್ನು ವಜಾಗೊಳಿಸಿತು ಮತ್ತು ಮುಂದಿನ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದಿತು.

Similar News