×
Ad

ಯಕ್ಷ ಕಲಾವಿದ ಜಗದೀಶ ನಲ್ಕ ನಿಧನ

Update: 2023-04-07 19:00 IST

ಉಡುಪಿ, ಎ.7: ತೆಂಕುತಿಟ್ಟಿನ ಪ್ರತಿಭಾನ್ವಿತ ಕಲಾವಿದರಾದ ಜಗದೀಶ ನಲ್ಕ (46) ಗುರುವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕಳೆದ 21 ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಗದೀಶ್ ನಲ್ಕ ಅವರು ಭಗವತಿ ಮಹಾತ್ಮೆಯಲ್ಲಿ ಈಶ್ವರನ ಪಾತ್ರ, ದೇವಿಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜಾಸುರನ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸುತ್ತಿದ್ದರು.

ಅವರು  ಪತ್ನಿ, ಪುತ್ರಿ, ಪುಟ್ಟ ಗಂಡು ಮಗುವನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಯಕ್ಷನಿಧಿಯ ಸದಸ್ಯ ರಾಗಿದ್ದ ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Similar News