×
Ad

ಬೆಳ್ತಂಗಡಿ: ಧರ್ಮ ನಿಂದನೆ, ಮಹಿಳೆಯರಿಗೆ ಅವಮಾನ ಆರೋಪ; ದೂರು ದಾಖಲು

Update: 2023-04-07 21:17 IST

ಬೆಳ್ತಂಗಡಿ: ನಾವೂರು ಗ್ರಾಮದಲ್ಲಿ ನಡೆದ ಪುರುಷ ಕಟ್ಟುವ ಕಾರ್ಯಕ್ರಮದಲ್ಲಿ‌ ಇಸ್ಲಾಂ ಧರ್ಮಕ್ಕೆ ಮತ್ತು ಮಹಿಳೆಯರಿಗೆ ಅವಮಾನವಾಗುವ ರೀತಿಯಲ್ಲಿ ವೇಷ ಹಾಕಿ ವರ್ತಿಸುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಎ.6ರಂದು ನಾವೂರಿನಲ್ಲಿ ನಡೆದ ಪುರುಷ ಕಟ್ಟುವುದು ಕಾರ್ಯಕ್ರಮದಲ್ಲಿ ಯುವಕರು ಬುರ್ಖಾ ಹಾಗು ಟೊಪ್ಪಿ ಹಾಕಿಕೊಂಡು ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ವರ್ತಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ.

ನಾವೂರಿನಲ್ಲಿ  ಪುರುಷ ಕಟ್ಟುವ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ಇಸ್ಲಾಂ ಧರ್ಮ ಹಾಗೂ ಮಹಿಳೆಯರ ನಿಂದನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್.ಡಿ.ಪಿ.ಐ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕಾರ್ಯಕ್ರಮದ ಆಯೋಜಕರ ಹಾಗೂ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. 

ಎಸ್.ಡಿ.ಪಿ‌ಐ ತಾಲೂಕು ಅಧ್ಯಕ್ಷ ‌ನವಾಝ್ ಶರೀಫ್ ಕಟ್ಟೆ, ಕಾರ್ಯದರ್ಶಿ ಫಝಲ್ ಉಜಿರೆ, ಸಾದಿಕ್ ಲಾಯಿಲ, ಶಮೀಮ್ ಯೂಸುಫ್, ಹುಸೈನ್ ಪಡಂಗಡಿ ಹಾಗೂ ಇತರರು ಇದ್ದರು.

Similar News