ಬೈಕಂಪಾಡಿ: ಗಾರೆ ಕೆಲಸಗಾರ ಬಿದ್ದು ಮೃತ್ಯು
ಮಂಗಳೂರು, ಎ.8:ನಗರ ಹೊರವಲಯದ ಬೈಕಂಪಾಡಿ ಬಳಿ ಗುರುವಾರ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಸಿಮೆಂಟ್ ಶೀಟ್ ತುಂಡಾದ ಪರಿಣಾಮ 30 ಅಡಿ ಕೆಳಗೆ ಬಿದ್ದು ಬಸವರಾಜ್ (40) ಎಂಬವರು ಮೃತಪಟ್ಟಿರುವು ದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು ತಿಳಿಸಿದ್ದಾರೆ.
ಬಸವರಾಜ್ ತನ್ನ ಕುಟುಂಬದೊಂದಿಗೆ ಬೈಕಂಪಾಡಿಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎ.6ರಂದು ಪೂರ್ವಾಹ್ನ 11:30ಕ್ಕೆ ಬಸವರಾಜ್ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಪ್ಯಾಕೇಜಿಂಗ್ ಕಂಪನಿಯಲ್ಲಿ ಗಾರೆ ಕೆಲಸ ಮಾಡುವ ವೇಳೆ ಹಳೆಯ ಸಿಮೆಂಟ್ ಶೀಟ್ ಮೇಲೆ ಕಾಲಿಟ್ಟಿದ್ದರು. ಇದರಿಂದ ಸಿಮೆಂಟ್ ಶೀಟ್ ತುಂಡಾಗಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯ ಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಸಂಜೆ 4ಕ್ಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ಸುರಕ್ಷತೆಗೆ ಅಗತ್ಯವಿರುವ ಸೇಪ್ಟಿಬೆಲ್ಟ್ ಇತ್ಯಾದಿ ಸುರಕ್ಷತಾ ಸಾಧನಗಳನ್ನು ನೀಡದೆ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿರುವುದರಿಂದ ಬಸವರಾಜ್ ಮೃತಪಟ್ಟಿದ್ದಾರೆ. ಹಾಗಾಗಿ ಗುತ್ತಿಗೆದಾರ ರಾಘುವೇಂದ್ರ ಮಹಾದೇವ ನಾಯ್ಕ್ ಮತ್ತು ಪ್ಯಾಕೇಜಿಂಗ್ ಕಂಪೆನಿಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.