‘ಎಸ್‌ಐಆರ್‌ಸಿ’ಗೆ ನೇಮಕ
Update: 2023-04-08 21:45 IST
ಮಂಗಳೂರು, ಎ.8: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದನ್ ಇಂಡಿಯಾ ರೀಜನಲ್ ಕೌನ್ಸಿಲ್ (‘ಎಸ್‌ಐಆರ್‌ಸಿ’)ನ 2023-24ನೆ ಸಾಲಿನ ಎಂಎಸ್‌ಎಂಇ ಮತ್ತು ಸ್ಟಾರ್ಟ್ ಅಪ್‌ಗಳ ಸಮಿತಿ ಸದಸ್ಯರನ್ನಾಗಿ ಐಸಿಎಐ ಇದರ ಎಸ್‌ಐಆರ್‌ಸಿ ಮಂಗಳೂರು ಶಾಖೆಯ ಮಾಜಿ ಅಧ್ಯಕ್ಷ ಸಿಎ ಎಸ್.ಎಸ್. ನಾಯಕ್ ಅವರನ್ನು ನೇಮಿಸಲಾಗಿದೆ.
ಎಸ್‌ಐಆರ್‌ಸಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಲಕ್ಷದ್ವೀಪದಲ್ಲಿ 45 ಶಾಖೆಗಳನ್ನು ಹೊಂದಿದ್ದು, ಸುಮಾರು 70,000 ಸಿಎ ಮತ್ತು 3 ಲಕ್ಷ ವಿದ್ಯಾರ್ಥಿಗಳನ್ನು ಹೊಂದಿದೆ ಎಂದು ಐಸಿಎಐ ಸದನ್ ಇಂಡಿಯಾ ರೀಜನಲ್ ಕೌನ್ಸಿಲ್‌ನ ಪ್ರಕಟನೆ ತಿಳಿಸಿದೆ.