×
Ad

ವಾಟ್ಸಪ್‌ ಮೂಲಕ ವದಂತಿಗಳನ್ನು ಹರಡಿದ್ದ ಬಜರಂಗದಳ ಸಂಚಾಲಕನ ನೇತೃತ್ವದ ತಂಡ: ಎಡಿಜಿಪಿ

ಬಿಹಾರ ಶರೀಫ್‌ ರಾಮನವಮಿ ಹಿಂಸಾಚಾರ ಪ್ರಕರಣ

Update: 2023-04-09 23:33 IST

ಪಾಟ್ನಾ: ಇಲ್ಲಿನ ಬಿಹಾರ್‌ ಶರೀಫ್‌ ನಲ್ಲಿ ರಾಮ ನವಮಿ ಸಂದರ್ಭದಲ್ಲಿ ಸ್ಫೋಟಗೊಂಡಿದ್ದ ಕೋಮು ಉದ್ವಿಗ್ನತೆಗೆ ಸಂಬಂಧಿಸಿದಂತೆ, ಪ್ರಕರಣದ ಮಾಸ್ಟರ್‌ ಮೈಂಡ್‌ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಎಡಿಜಿ ಜಿತೇಂದ್ರ ಸಿಂಗ್‌ ಗವಾರ್‌ ತಿಳಿಸಿದ್ದಾರೆ. ಆರೋಪಿಯು ಬಜರಂಗದಳದ ನಾಯಕನಾಗಿದ್ದಾನೆ ಎಂದು ವರದಿ ತಿಳಿಸಿದೆ.

ಬಜರಂಗದಳ ಮುಖಂಡ ಕುಂದನ್‌ ಕುಮಾರ್‌ ಎಂಬಾತ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾನೆ. ಆತ ಸೋಶಿಯಲ್‌ ಮೀಡಿಯಾದಲ್ಲಿ ಮಾಸ್ಟರ್‌ ಮೈಂಡ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈಗಾಗಲೇ ಗಲಭೆಗೆ ಸಂಬಂಧಿಸಿದಂತೆ 15 ಪ್ರಕರಣಗಳನ್ನು ದಾಖಲಿಸಲಾಗಿದ್ದು, 140 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿತೇಂದ್ರ ಸಿಂಗ್‌ ತಿಳಿಸಿದ್ದಾಗಿ ವರದಿಯಾಗಿದೆ.

ಕುಂದನ್‌ ಕುಮಾರ್‌ ನ ನಾಯಕತ್ವದಲ್ಲಿ ವಾಟ್ಸಪ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವದಂತಿಗಳನ್ನು ಹರಿಬಿಡಲಾಗುತ್ತಿತ್ತು. ಇದಕ್ಕಾಗಿ 457ಕ್ಕೂ ಹೆಚ್ಚಿನ ಗ್ರೂಪ್‌ ಗಳನ್ನು ರಚಿಸಲಾಗಿತ್ತು. ಈ ಗ್ರೂಪ್‌ ಗಳಲ್ಲೇ ಗಲಭೆ ಎಬ್ಬಿಸುವ ಕುರಿತ ಚರ್ಚೆಗಳು ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

Similar News