ಎ.14: ಕೊಂಕಣಿ ಚಲನಚಿತ್ರ ಬಿಡುಗಡೆ
ಮಂಗಳೂರು, ಎ.11: ಬರೆಟ್ಟೊ ಪ್ರೊಡಕ್ಷನ್‌ನಡಿ ಮೂಡಿ ಬಂದಿರುವ ಜಾನ್ ಸುನಿಲ್ ನಿರ್ಮಾಣದ ಮೆಲ್ವಿನ್ ಎಲ್ಪೆಲ್ ನಿರ್ದೇಶನದ ‘ವೊಡ್ತಾಂತ್ಲೆ ಫುಲ್’ ಕೊಂಕಣಿ ಚಲನಚಿತ್ರವು ಎ.14ರಂದು ನಗರದ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ತೆರೆಕಾಣಲಿದೆ ಎಂದು ಚಿತ್ರದ ಸಹ ನಿರ್ದೇಶಕ ನೋರ್ಬರ್ಟ್ ಜಾನ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಆಸ್ಕರ್ ಫೆರ್ನಾಂಡೀಸ್, ಸುನೀತಾ ಮರಿಯ, ಲೀಶಾ ಕರ್ಡೋಜ, ನೋಬರ್ಟ್ ಜಾನ್, ಸ್ಟಾನಿ ಅಲ್ವರಿಸ್, ಜೀವನ್ ವಾಸ್, ಸಂತೋಷ್ ಮುಲ್ಲೇರಿಯ, ಫಾ. ಸಿರಿಲ್ ಲೋಬೊ, ಸಿ. ಜೆಸಿಂತಾ ಬರೆಟ್ಟೋ, ಹ್ಯಾರಿ ಪ್ರವೀಣ್ ಕೊರೇಯ ಮತ್ತಿತರರು ಕಾಣಿಸಿಕೊಂಡಿದ್ದಾರೆ ಎಂದರು.
ಶಾಲೆಯ ಮಕ್ಕಳ ಮೇಲೆ ಬೀಳುವ ಶಿಕ್ಷಣದ ಒತ್ತಡ, ಹೆತ್ತವರ ನಿರ್ಲಕ್ಷಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ತಪ್ಪು ಸಂದೇಶಗಳಿಂದ ಉಂಟಾಗುವ ಪರಿಣಾಮ ಈ ಚಿತ್ರಕ್ಕೆ ಅರ್ಜುನ್ ಲೂಯಿಸ್ ಸಾಹಿತ್ಯ ಬರೆದಿದ್ದು, ಡೋಲ್ವಿನ್ ಕೊಳಲಾಗಿರಿ ಸಂಗೀತ ನೀಡಿದ್ದಾರೆ. ಈ ಚಿತ್ರದ ಆಡಿಯೋ ರೈಟ್ಸ್ ಅನ್ನು ಜಸ್ಟ್ ರೋಲ್ ಫಿಲಂಸ್ ಯೂಟ್ಯೂಬ್ ಚಾನೆಲ್ ಪಡೆದುಕೊಂಡಿದೆ. ಕೌಂಟುಂಬಿಕ ಹಾಗೂ ಸಾಮಾಜಿಕ ಅರಿವು ಮೂಡಿಸುವ ಚಿತ್ರ ಇದಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಆಸ್ಕರ್ ಫೆರ್ನಾಂಡಿಸ್, ಜಾನ್ ಸುನಿಲ್, ಅರ್ವಿನ್ ಲೋಬೋ ಇದ್ದರು.