ಎ.15: ತುಳು ಕೂಟ ಕುಡ್ಲದಿಂದ ಬಿಸು ಪರ್ಬ
ಮಂಗಳೂರು, ಎ.11: ತುಳು ಕೂಟ ಕುಡ್ಲ ಇದರ ವತಿಯಿಂದ ಬಂಗಾರ್ ಪರ್ಬದ ಸರಣಿ ವೈಭವೋ 2 ಬಿಸು ಪರ್ಬ ಸಂಭ್ರಮೊ ಎ.15ರಂದು ಸಂಜೆ 4:30ಕ್ಕೆ ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ ಎಂದು ತುಳುಕೂಟ ಕುಡ್ಲದ ಅಧ್ಯಕ್ಷ ಬಿ. ದಾಮೋದರ ನಿಸರ್ಗ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 46 ವರ್ಷಗಳಿಂದ ಪ್ರಕಟಿತ ತುಳು ನಾಟಕ ಕೃತಿಗಳಿಗೆ ನೀಡುತ್ತಿರುವ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ದೀಪಕ್ ಎಸ್. ಕೋಟ್ಯಾನ್ ಕುತ್ತೆತ್ತೂರು (ಕೃತಿ: ಮಾಯದಪ್ಪ ಮಾಯಂದಾಲ್) ಪ್ರಥಮ, ಪರಮಾನಂದ ಸಾಲ್ಯಾನ್ ಸಸಿಹಿತ್ಲು (ಕೃತಿ: ಪುರ್ಸೆ ಬಿರ್ಸೆ ರಾಮೆ) ದ್ವಿತೀಯ, ಅಕ್ಷಯ್ ಆರ್. ಶೆಟ್ಟಿ, ಪೆರಾರ ಮುಂಡಬೆಟ್ಟು ಗುತ್ತು (ಕೃತಿ: ಪೆರ್ಗ) ತತೀಯ ಬಹುಮಾನ ಪ್ರಶಸ್ತಿ, ನಗದು ನೀಡಿ ಗೌರವಿಸಲಾಗುತ್ತದೆ ಎಂದರು.
ಪ್ರಸೀತಾ ಪದೀಪ್, ಹೇಮ ನಿಸರ್ಗರವರ ನೇತೃತ್ವದಲ್ಲಿ ಬಿಸು ಕಣಿ (ವಿಷು ಕಣಿ) ಇಟ್ಟು ಕಾರ್ಯಕ್ರಮ ಆರಂಭಿಸಲಾಗುತ್ತದೆ. ಕರ್ನಾಟಕ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಬಿ. ಪದ್ಮನಾಭ ಕೋಟ್ಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಲೇಖಕಿ-ಸಾಹಿತಿ ಅಕ್ಷತಾ ರಾಜ್ ಪೆರ್ಲರವರು ಬಿಸು ಪರ್ಬದ ಮಹತ್ವವನ್ನು ತಿಳಿಸಿಕೊಡಲಿದ್ದಾರೆ. ವಿಶ್ವನಾಥ ಶೆಟ್ಟಿ, ಕೆ.ಇ. ಪ್ರಕಾಶ್, ಡಾ. ಹರಿಕೃಷ್ಣ ಪುನರೂರು, ಪಿ. ರಮಾನಾಥ ಹೆಗ್ಡೆ, ಪುರುಷೋತ್ತಮ ಭಟ್ ಉಪಸ್ಥಿತರಿರುವರು. ಬಿಸುಪರ್ಬದ ಆಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಲಕ್ಷ್ಮೀ ಎಲ್. ನಿಡ್ವಣ್ಣಾಯ ಮತ್ತು ಬಳಗದವರಿಂದ ತುಳು ಯಕ್ಷಗಾನ ’ಮಣ್ಣ ಮಗೆ’ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತುಳುಕೂಟ ಕುಡ್ಲದ ಉಪಾಧ್ಯಕ್ಷ, ರಂಗನಟ ವಿ.ಜಿ. ಪಾಲ್, ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ಕೋಶಾಧಿಕಾರಿ ಗೋಪಾಲಕೃಷ್ಣ ಪಿ. ಮತ್ತು ಗೌರವ ಸಲಹೆಗಾರ ಚಂದ್ರಶೇಖರ ಸುವರ್ಣ ಉಪಸ್ಥಿತರಿದ್ದರು.