ಕಾರವಾರ ವಿಭಾಗದಲ್ಲಿ ಉನ್ನತೀಕರಣ ಕಾಮಗಾರಿ: ಮಡಗಾಂವ್-ಮಂಗಳೂರು ರೈಲು ಸಂಚಾರ ವ್ಯತ್ಯಯ
ಉಡುಪಿ, ಎ.11: ಕೊಂಕಣ ರೈಲ್ವೆಯ ಕಾರವಾರ ವಿಭಾಗದ ಮಡಗಾಂವ್- ಬಾಲ್ಲಿ ನಡುವೆ ಮೂಲಭೂತ ಸೌಕರ್ಯಗಳ ಉನ್ನತೀಕರಣವೂ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಎ.13 ಗುರುವಾರ ಹಾಗೂ ಎ.14 ಶುಕ್ರವಾರದಂದು ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ಪ್ಯಾಸೆಂಜರ್ ದೈನಂದಿನ ರೈಲಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.06602 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ಪ್ಯಾಸೆಂಜರ್ ವಿಶೇಷ ದೈನಂದಿನ ರೈಲಿನ ಎ.13ರ ಸಂಚಾರ ಕನಕೋನಾ ನಿಲ್ದಾಣದಲ್ಲಿ ಮುಕ್ತಾಯಗೊಳ್ಳಲಿದೆ. ಅದೇ ರೀತಿ ರೈಲು ನಂ.06601 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ರೈಲಿನ ಎ.13ರ ಸಂಚಾರ ಕನಕೋನಾದಿಂದ ನಿಗದಿತ ಸಮಯಕ್ಕೆ ಪ್ರಾರಂಭಗೊಳ್ಳಲಿದೆ.
ಎ.14ರಂದು ಸಹ ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ನಡುವಿನ ಸಂಚಾರ ಕನಕೋನಾದಲ್ಲಿ ಕೊನೆಗೊಂಡು, ನಿಗದಿತ ಅವಧಿಗೆ ಅಲ್ಲಿಂದಲೇ ಮಂಗಳೂರು ಸೆಂಟ್ರಲ್‌ಗೆ ಪ್ರಯಾಣ ಪ್ರಾರಂಭಗೊಳ್ಳುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.