ಕೋಟೆ ಕೋಡಿ: ಸೌಹಾರ್ದ ಇಪ್ತಾರ್ ಕೂಟ
ಕುಂದಾಪುರ : ಕೋಟೆ ಕೋಡಿಯ ಬದ್ರಿಯಾ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಸೌಹಾರ್ದ ಇಪ್ತಾರ್ ಕೂಟವನ್ನು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಎ.9ರಂದು ಏರ್ಪಡಿಸಲಾಗಿತ್ತು.
ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಭಾಗವಹಿಸಿ ಸೌಹಾರ್ದ ಕ್ಷಣಕ್ಕೆ ಸಾಕ್ಷಿಯಾದರು. ಕೋಡಿ ಚಕ್ರಮ್ಮ ದೇವಸ್ಥಾನದ ಮೊಕ್ತೇಸರ ಗೋಪಾಲ ಪೂಜಾರಿ, ಮುಖಂಡರಾದ ಶಂಕರ್ ಪೂಜಾರಿ, ಸಂಜೀವ ಕೋಡಿ, ತಿಮ್ಮಪ್ಪ ಖಾರ್ವಿ, ಗಂಗಾಧರ ದೀಪ ಎಲೆಕ್ಟ್ರಿಷಿಯನ್, ಸುನಿಲ್ ಕೋಡಿ, ಅರುಣ್ ಕೊಡಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬದ್ರಿಯಾ ಯಂಗ್‌ಮೆನ್ಸ್ ಅಧ್ಯಕ್ಷ ಅಬ್ದುಲ್ ಲತೀಫ್, ಕಾರ್ಯದರ್ಶಿ ಅಬ್ದುಲ್ ಖಾದರ್, ಕೋಶಾಧಿಕಾರಿ ಸಲ್ಮಾನ್ ಪಾರೀಶ್ ಹಾಗೂ ಕಮಿಟಿಯ ಗೌರವಾಧ್ಯಕ್ಷ ಆಸಿಫ್ ದುಬೈ ಮತ್ತು ಶಾರುಖ್ ದುಬೈ, ಬದ್ರಿಯ ಜುಮ್ಮಾ ಮಸೀದಿಯ ಖತಿಬ್ ಇಸ್ಮಾಯಿಲ್ ಸಖಾಫಿ, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಬ್ಯಾರಿ, ಉಪಾಧ್ಯಕ್ಷ ಅಬ್ದುಲ್ ಕೋಟೆ, ಮೊಹಿಯದ್ದಿನ್ ಜುಮ್ಮಾ ಮಸೀದಿ ಅಧ್ಯಕ್ಷ ಜಿ.ಎಂ.ಮುಸ್ತಫಾ, ಕುಂದಾಪುರ ಪುರಸಭೆ ಸದಸ್ಯ ಅಶ್ಫಾಕ್ ಕೋಡಿ ಹಾಗೂ ಬಾಪು ಸೈನರ್, ಗಡಿ ಮೊಹಮ್ಮದ್ ಉಪಸ್ಥಿತರಿದ್ದರು.