×
Ad

ನಟ ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ: ರಾಜಸ್ಥಾನ ಮೂಲದ 16 ವರ್ಷದ ಬಾಲಕನ ಬಂಧನ

ತನ್ನನ್ನು ʼರಾಕಿ ಭಾಯ್‌ʼ ಎಂದು ಗುರುತಿಸಿಕೊಂಡಿದ್ದ ಆರೋಪಿ

Update: 2023-04-11 20:52 IST

ಮುಂಬೈ,ಎ.11: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ  ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದ್ದು, ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಮ್ ಗೆ ಬೆದರಿಕೆ ಕರೆ ಬಂದಿತ್ತು.

ಕರೆ ಮಾಡಿದ ವ್ಯಕ್ತಿ ತನ್ನನ್ನು ಜೋಧಪುರದ ರಾಕಿ ಭಾಯಿ ಎಂದು ಗುರುತಿಸಿಕೊಂಡಿದ್ದು, 2023, ಎ.30ರಂದು ಸಲ್ಮಾನ್ ಖಾನ್ ರನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದ. ಪ್ರಕರಣದಲ್ಲಿ ತನಿಖೆಯನ್ನಾರಂಭಿಸಿದ ಪೊಲೀಸರು ಮುಂಬೈನಿಂದ 70 ಕಿ.ಮೀ.ದೂರದ ಥಾಣೆ ಜಿಲ್ಲೆಯ ಶಹಾಪುರದಿಂದ ಕರೆ ಬಂದಿದ್ದನ್ನು ಪತ್ತೆ ಹಚ್ಚಿದ್ದರು.

ಮಂಗಳವಾರ ಶಹಾಪುರಕ್ಕೆ ತೆರಳಿ ಆರೋಪಿ, 16 ವರ್ಷದ ರಾಜಸ್ಥಾನ ಮೂಲದ ಬಾಲಕನನ್ನು ಬಂಧಿಸಿದ ಮುಂಬೈ ಪೊಲೀಸ್ ತಂಡವು,ಮಂದಿನ ತನಿಖೆಗಾಗಿ ಇಲ್ಲಿಯ ಆಝಾದ್ ಮೈದಾನ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.

Similar News