×
Ad

ನಿಟ್ಟೆ ವಿವಿ - ಜಪಾನ್ ಕೈಜೋ ಕಾರ್ಪೊರೇಷನ್ ಒಡಂಬಡಿಕೆ

Update: 2023-04-12 17:33 IST

ಕೊಣಾಜೆ: ನಿಟ್ಟೆ ವಿಶ್ವವಿದ್ಯಾಲಯವು ಜಪಾನ್ ನ ಕೈಜೋ ಕಾರ್ಪೊರೇಷನ್ ನೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಮಂಗಳವಾರ ಸಹಿ ಹಾಕಿತು.

ಈ ತಿಳಿವಳಿಕೆ ಒಪ್ಪಂದದ ಪ್ರಕಾರ ಕೈಜೋ ಕಾರ್ಪೊರೇಷನ್ (ಪ್ರಮುಖ ಸೆಮಿಕಂಡಕ್ಟರ್ ಸಲಕರಣೆಗಳ ತಯಾರಿಕಾ ಕಂಪನಿ) ಮತ್ತು ಶಿಬುಯಾ ಕಾರ್ಪೊರೇಷನ್ ನ ಗ್ರೂಪ್ ಕಂಪನಿ ನಿಟ್ಟೆ ವಿಶ್ವವಿದ್ಯಾಲಯದಿಂದ ಐಟಿ ಪದವೀಧರರನ್ನು ನೇಮಿಸಿಕೊಳ್ಳಲು ನಿರ್ಧರಿಸಿವೆ. ಕೈಜೋ ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಡಿಸೈನ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಹೊಸಬರುಗಳನ್ನು ನೇಮಿಸಿಕೊಳ್ಳುವುದನ್ನುಮುಂದುವರಿಸಲಿದೆ.  ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶಗಳು, ಇಂಟರ್ನ್ಶಿಪ್ ಮತ್ತು ತರಬೇತಿ, ಶ್ರೇಷ್ಠತೆಯ ಕೇಂದ್ರ (ಸಿಒಇ) ಮತ್ತು ನಿಟ್ಟೆ ಬೋಧಕರೊಂದಿಗೆ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಹೊಂದಲು ಎರಡೂ ಕಡೆಯವರು ಒಪ್ಪಿಕೊಂಡರು.

ಕಾರ್ಯಕ್ರಮದಲ್ಲಿ, ಕೈಜೋ ಕಾರ್ಪೊರೇಷನ್ ಜಪಾನ್ ನ ಕಡೆಯಿಂದ ತೆತ್ಸುವೊ ಓಯಿಕವ ಪ್ರತಿನಿಧಿ ನಿರ್ದೇಶಕ ಮತ್ತು ಅಧ್ಯಕ್ಷ (ಸಿಇಒ) ಮತ್ತು ಹಿದೆನೋರಿ ಸಸಹರ - ವ್ಯವಸ್ಥಾಪಕ ನಿರ್ದೇಶಕರು ಮತ್ತು ಜನರಲ್ ಮ್ಯಾನೇಜರ್ ಪ್ರತಿನಿಧಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ  ಎನ್ . ವಿನಯ ಹೆಗ್ಡೆ, ಸಹಕುಲಾಧಿಪತಿಗಳಾದ ಡಾ.ಎಂ. ಶಾಂತಾರಾಮ್ ಶೆಟ್ಟಿ ಮತ್ತು ಶ್ರೀ ವಿಶಾಲ್ ಹೆಗ್ಡೆ, ಕುಲಪತಿಗಳಾದ ಡಾ.ಸತೀಶ್ ಕುಮಾರ್ ಭಂಡಾರಿ, ಸಹಕುಲಪತಿಗಳಾದ ಡಾ.ಎಂ. ಎಸ್.ಮೂಡಿತ್ತಾಯ, ಕುಲಸಚಿವರಾದ ಡಾ.ಹರ್ಷ ಹಾಲಹಳ್ಳಿ, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನಿರಂಜನ್ ಚಿಪ್ಳುಂಕರ್  ಮತ್ತು ಶ್ರೀ ನಂದನ್ ಕಶ್ಯಪ್, ಕಾನೂನು ಸಲಹೆಗಾರರು ಉಪಸ್ಥಿತರಿದ್ದರು.

ನಿಟ್ಟೆ ವಿಶ್ವವಿದ್ಯಾಲಯದ  ಅಂತಾರಾಷ್ಟ್ರೀಯ ಸಹಯೋಗ (ಏಷ್ಯಾ-ಪೆಸಿಫಿಕ್ ವಲಯ) ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಮತ್ತು  ಜಪಾನ್ ಸಹಯೋಗಗಳ ಕಾರ್ಯನಿರ್ವಾಹಕ ಸಹಾಯಕಿ  ಯಸುಕೊ ಸಾಟೊ ಕಾರ್ಯಕ್ರಮಕ್ಕೆ ಸಹಕರಿಸಿದರು.

Similar News