ಉಳ್ಳಾಲ: ಮೀನಿನ ಬಲೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ನಷ್ಟ
Update: 2023-04-12 19:30 IST
ಉಳ್ಳಾಲ: ಆಕಸ್ಮಿಕ ಬೆಂಕಿ ಅನಾಹುತದಿಂದ ನಾಡದೋಣಿ ಮೀನುಗಾರರ ಬಲೆಗಳು ಸುಟ್ಟು ಕರಕಲಾದ ಘಟನೆ ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆ ಬಳಿಯಲ್ಲಿ ಬುಧವಾರ ಮದ್ಯಾಹ್ನ ನಡೆದಿದ್ದು, 15 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆ ಬಳಿಯ ನಾಡ ದೋಣಿಗಳ ಶೆಡ್ ಹತ್ತಿರ ಇಡಲಾಗಿದ್ದ ಮೀನಿನ ಬಲೆಗೆ ಬೆಂಕಿ ತಗುಲಿದ್ದು ಬಲೆಗಳು ಸುಟ್ಟು ಕರಕಲಾಗಿವೆ.
ನಾಡ ದೋಣಿ ಮೀನುಗಾರರಾದ ಹೇಮಂತ್ ಉಚ್ಚಿಲ, ಸಂತೋಷ್ ಉಚ್ಚಿಲ, ಸಾಧನ ಉಚ್ಚಿಲ, ಶೇಖರ್ ಸೋಮೇಶ್ವರ, ಯೋಗೀಶ್ ಸೋಮೇಶ್ವರ ಅವರ ಮೀನಿನ ಬಲೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮಾರ್ಚ್ ತಿಂಗಳಲ್ಲೂ ಇದೇ ಪ್ರದೇಶದಲ್ಲಿ ಎರಡು ನಾಡ ದೋಣಿ ಮತ್ತು ಅದರಲ್ಲಿದ್ದ ಮೀನಿನ ಬಲೆಗಳು ಬೆಂಕಿ ಆಕಸ್ಮಿಕದಿಂದ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು.