ಮೇ ತಿಂಗಳವರೆಗೆ ಮನೆಯಲ್ಲೇ ಇರುವಂತೆ ಅಫ್ಘಾನ್ ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ಸೂಚನೆ

Update: 2023-04-12 17:28 GMT

ವಿಶ್ವಸಂಸ್ಥೆ, ಎ.12: ಮಹಿಳಾ ಸಿಬಂದಿಗಳು ಕೆಲಸ ಮಾಡುವುದಕ್ಕೆ ತಾಲಿಬಾನ್ ಆಡಳಿತ ನಿಷೇಧ ಹೇರಿದ ಬಳಿಕ ಅಫ್ಘಾನ್ನಲ್ಲಿರುವ ವಿಶ್ವಸಂಸ್ಥೆಯ ಆಯೋಗ ತನ್ನ ಕಾರ್ಯಾಚರಣೆಯ ಬಗ್ಗೆ ಪರಿಶೀಲನೆ ನಡೆಸಿ ಮೇ ತಿಂಗಳವರೆಗೆ ಕೆಲಸಕ್ಕೆ ಹಾಜರಾಗಬೇಡಿ ಎಂದು ಸುಮಾರು 3000ದಷ್ಟಿರುವ ಅಫ್ಘಾನ್ ಸಿಬಂದಿಗಳಿಗೆ(ಅಂತರಾಷ್ಟ್ರೀಯ ನೆರವು ಒದಗಿಸುವ ಸಂಘಟನೆಗಳ ಸಿಬಂದಿ) ಸೂಚಿಸಿದೆ.

2021ರಲ್ಲಿ ಅಧಿಕಾರ ಕೈವಶಪಡಿಸಿಕೊಂಡ ತಾಲಿಬಾನ್, ಜಾಗತಿಕ ಸಂಘಟನೆಗಳಲ್ಲಿ ಅಫ್ಘಾನ್ನ ಮಹಿಳೆಯರು ಕೆಲಸ ಮಾಡುವುದನ್ನು ನಿಷೇಧಿಸಿರುವುದಾಗಿ ಹೇಳಿತ್ತು. `ಈ ನಿಷೇಧದ ಮೂಲಕ ವಿಶ್ವಸಂಸ್ಥೆ ನಿಯೋಗವು ಅಫ್ಘಾನ್ ಜನರ ನೆರವಿಗೆ ನಿಲ್ಲುವುದು, ಅವರಿಗೆ ಅಗತ್ಯ ನೆರವನ್ನು ಒದಗಿಸುವ ವಿಷಯದ ಬಗ್ಗೆ ಮರು ಆಲೋಚಿಸಬೇಕೆಂದು ತಾಲಿಬಾನ್ನ ಅಧಿಕಾರಿಗಳು  ಬಯಸಿದ್ದಾರೆ. ಈ ಆದೇಶವನ್ನು ಜಾರಿಗೊಳಿಸುವುದು ಜಾಗತಿಕ ಸಂಸ್ಥೆಯ ಸನದಿನ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆ ನಿಯೋಗ ಹೇಳಿದೆ. ಸರಕಾರೇತರ ಸಂಘಟನೆಗಳ ಮಹಿಳಾ ಸಿಬಂದಿಗಳ ಕಾರ್ಯನಿರ್ವಹಣೆಗೆ ಕಳೆದ ಡಿಸೆಂಬರ್ನಲ್ಲಿ ತಾಲಿಬಾನ್ ನಿಷೇಧ ವಿಧಿಸಿರುವುದಕ್ಕೆ ವ್ಯಾಪಕ ಅಂತರಾಷ್ಟ್ರೀಯ ಖಂಡನೆ ವ್ಯಕ್ತವಾಗಿತ್ತು.

ಸಾಂಪ್ರದಾಯಿಕ ದೇಶದಲ್ಲಿ ನೆರವಿನ ಅಗತ್ಯವಿರುವ ಮಹಿಳೆಯರಿಗೆ ನೆರವು ತಲುಪಿಸುವುದು ಮಹಿಳಾ ಸಿಬಂದಿಗಳ ವಿನಹ ಸಾಧ್ಯವಿಲ್ಲ. ಅಲ್ಲದೆ ಅಫ್ಘಾನಿಸ್ತಾನದ ಮಾನವೀಯ ನೆರವಿನ ಕಾರ್ಯಕ್ರಮಗಳಿಗೆ ದೇಣಿಗೆ ಸ್ಥಗಿತಗೊಳ್ಳಬಹುದು ಎಂದು ಕೆಲವು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Similar News