×
Ad

ರಾಜತಾಂತ್ರಿಕ ಸಂಬಂಧ, ವಿಮಾನಯಾನ ಪುನಾರಂಭಕ್ಕೆ ಯುಎಇ-ಸಿರಿಯ ನಿರ್ಧಾರ

Update: 2023-04-13 23:05 IST

ರಿಯಾದ್,ಎ.13: ದಶಕಕ್ಕೂ ಅಧಿಕ ಸಮಯದ ಬಳಿಕ ಪರಸ್ಪರರ ದೇಶಗಳಲ್ಲಿ ರಾಯಭಾರಿ ಕಚೇರಿ ತೆರೆಯಲು ಹಾಗೂ ವಿಮಾನಯಾನವನ್ನು ಪುನಾರಂಭಿಸಲು ನಿರ್ಧರಿಸಿವೆ ಎಂದು ಗುರುವಾರ ಉಭಯ ರಾಷ್ಟ್ರಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸೌದಿ ಅರೇಬಿಯದ ರಾಜಧಾನಿ ಜಿದ್ದಾಗೆ ಗುರುವಾರ ಭೇಟಿ ನೀಡಿದದ ಸಿರಿಯ ವಿದೇಶಾಂಗ ಹಾಗೂ ಅನಿವಾಸಿ ವ್ಯವಹಾರಗಳ ಸಚಿವ ಫೈಸಲ್ ಮಿಕ್ದಾದ್ ಅವರು ಸೌದಿಯ ವಿದೇಶಾಂಗ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಬಿನ್ ಅಬ್ದುಲ್ಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಈ ಜಂಟಿ ಹೇಳಿಕೆ ನೀಡಿದ್ದಾರೆ.

2012ರಲ್ಲಿ ಸಿರಿಯದ ಜೊತೆ ಸೌದಿ ಆರೇಬಿಯವು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡ ಬಳಿಕ ಆ ದೇಶಕ್ಕೆ ಸಿರಿಯದ ರಾಜತಾಂತ್ರಿಕರೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ.

2011ರಲ್ಲಿ ಸಿರಿಯದಲ್ಲಿ ಭುಗಿಲೆದ್ದ ಆಡಳಿತ ವಿರೋಧಿ ಬಂಡಾಯದಲ್ಲಿ ಪ್ರತಿಭಟನಕಾರರನ್ನು, ನಾಗರಿಕರನ್ನು ಸಿರಿಯ ಅಧ್ಯಕ್ಷ ಬಶರ್ ಅಸ್ಸಾದ್ ಸರಕಾರವು ನಿರ್ದಯವಾಗಿ ದಮನಿಸಿದ್ದನ್ನು ವಿರೋಧಿಸಿ, ಸೌದಿ ಆರೇಬಿಯವು ಆ ದೇಶದ ಜೊತೆ ನಂಟನ್ನು ಕಡಿದುಕೊಂಡಿತ್ತು. ಆನಂತರ ಸಿರಿಯವನ್ನು ಆರಬ್ ಲೀಗ್ ಒಕ್ಕೂಟದಿಂದಲೂ ಹೊರಗಿಡಲಾಗಿತ್ತು.

Similar News