×
Ad

ಐಪಿಎಲ್: ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್‌ಗೆ ರೋಚಕ ಜಯ

ಶುಭಮನ್ ಗಿಲ್ ಅರ್ಧಶತಕ

Update: 2023-04-13 23:26 IST

ಮೊಹಾಲಿ, ಎ.13: ಆರಂಭಿಕ ಬ್ಯಾಟರ್ ಶುಭಮನ್ ಗಿಲ್( 67 ರನ್, 49 ಎಸೆತ,7 ಬೌಂಡರಿ, 1 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧದ ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.
 
ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 154 ರನ್ ಬೆನ್ನಟ್ಟಿದ ಗುಜರಾತ್ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ಗಿಲ್ ಹಾಗೂ ವೃದ್ದಿಮಾನ್ ಸಹಾ(30 ರನ್, 19 ಎಸೆತ)4.4 ಓವರ್‌ಗಳಲ್ಲಿ 48 ರನ್ ಸೇರಿಸಿ ಬಿರುಸಿನ ಆರಂಭ ನೀಡಿದರು. ಸಾಯಿ ಸುದರ್ಶನ್(19 ರನ್) ಹಾಗೂ ಡೇವಿಡ್ ಮಿಲ್ಲರ್(ಔಟಾಗದೆ 17, 18 ಎಸೆತ)ಎರಡಂಕೆ ಸ್ಕೋರ್ ಗಳಿಸಿದರು.

 ಹರ್ಮೀತ್ ಬ್ರಾತ್(1-20), ಕರನ್(1-25), ಅರ್ಷದೀಪ್(1-33) ಹಾಗೂ ಕಾಗಿಸೊ ರಬಾಡ(1-36) ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 153 ರನ್ ಗಳಿಸಿತು.
 

Similar News