ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ
Update: 2023-04-14 20:30 IST
ಉಡುಪಿ: ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಸಿದ್ದು, ಈ ಸಂಬಂಧ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಕಾಪು ಕ್ಷೇತ್ರದಿಂದ ಸಬೀನಾ ಸಮದ್, ಕಾರ್ಕಳ ಕ್ಷೇತ್ರದಿಂದ ಶ್ರೀಕಾಂತ್ ಕೊಟ್ಟೂರ್, ಉಡುಪಿ ಕ್ಷೇತ್ರದಿಂದ ದಕ್ಷತ್ ಆರ್.ಶೆಟ್ಟಿ, ಬೈಂದೂರು ಕ್ಷೇತ್ರದಿಂದ ಮನ್ಸೂರ್ ಇಬ್ರಾಹಿಂ, ಕುಂದಾಪುರ ಕ್ಷೇತ್ರದಿಂದ ರಮೇಶ್ ಕುಂದಾಪುರ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.