×
Ad

ಐಪಿಎಲ್: ಬ್ರೂಕ್ ಶತಕ, ಕೆಕೆಆರ್ ವಿರುದ್ಧ ಹೈದರಾಬಾದ್ ಜಯಭೇರಿ

Update: 2023-04-14 23:21 IST

ಕೋಲ್ಕತಾ, ಎ.14: ಆರಂಭಿಕ ಬ್ಯಾಟರ್ ಹ್ಯಾರಿ ಬ್ರೂಕ್ ಶತಕ(ಔಟಾಗದೆ 100 ರನ್, 55 ಎಸೆತ,12 ಬೌಂಡರಿ, 3 ಸಿಕ್ಸರ್)ಹಾಗೂ ನಾಯಕ ಮರ್ಕ್ರಮ್ ಅರ್ಧಶತಕದ(50 ರನ್, 26 ಎಸೆತ, 2 ಬೌಂಡರಿ, 5 ಸಿಕ್ಸರ್) ಕೊಡುಗೆಯ ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್‌ನ 19ನೇ ಪಂದ್ಯವನ್ನು 23 ರನ್ ಅಂತರದಿಂದ ಗೆದ್ದುಕೊಂಡಿದೆ.

ಶುಕ್ರವಾರ ಗೆಲ್ಲಲು 229 ರನ್ ಗುರಿ ಪಡೆದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕೆಕೆಆರ್ ಪರ ನಾಯಕ ನಿತಿಶ್ ರಾಣಾ(75 ರನ್, 41 ಎಸೆತ,5 ಬೌಂಡರಿ, 6 ಸಿಕ್ಸರ್)ಹಾಗೂ ರಿಂಕು ಸಿಂಗ್(ಔಟಾಗದೆ 58 ರನ್, 31 ಎಸೆತ, 4 ಬೌಂಡರಿ, 4 ಸಿಕ್ಸರ್)ಅರ್ಧಶತಕ, ಜಗದೀಶನ್(36 ರನ್, 21 ಎಸೆತ) ಹಾಗೂ ಶಾರ್ದೂಲ್ ಠಾಕೂರ್(12 ರನ್ )ಎರಡಂಕೆಯ ಸ್ಕೋರ್ ಗಳಿಸಿದರು.

ಹೈದರಾಬಾದ್ ಪರ ಮಯಾಂಕ್ ಮರ್ಕಂಡೆ(2-27) ಹಾಗೂ ಮಾರ್ಕೊ ಜಾನ್ಸನ್(2-37)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
 
 ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ  ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. 

Similar News