ಜಮ್ಮು ಹಾಗೂ ಕಾಶ್ಮೀರ: ಕಾಲು ಸೇತುವೆ ಕುಸಿತ; 40 ಜನರಿಗೆ ಗಾಯ
Update: 2023-04-14 23:56 IST
ಉಧಮ್‌ಪುರ, ಎ. 14: ಜಮ್ಮು ಹಾಗೂ ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಕಾಲು ಸೇತುವೆಯೊಂದು ಕುಸಿದ ಪರಿಣಾಮ ಹಲವು ಮಕ್ಕಳು ಸೇರಿದಂತೆ 40 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಶಾಖಿ ಆಚರಣೆಯ ಸಂದರ್ಭ ಚೆನಾನಿ ಬ್ಲಾಕ್‌ನ ಬೈನ್ ಗ್ರಾಮದ ಬೇನಿ ಸಂಗಮ್‌ನಲ್ಲಿ ಈ ದುರ್ಘಟನೆ ನಡೆದಿದೆ. ದುರಂತದ ಸಂದರ್ಭ ಕಾಲು ಸೇತುವೆಯ ಮೇಲೆ ದೊಡ್ಡ ಸಂಖ್ಯೆಯ ಜನರಿದ್ದರು ಎಂದು ಅವರು ತಿಳಿಸಿದ್ದಾರೆ. ಜನರ ಭಾರದಿಂದಾಗಿ ಸೇತುವೆ ಕುಸಿದಿದೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ಜಮ್ಮುವಿನ ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ತಿಳಿಸಿದ್ದಾರೆ.